ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಸಂತಾಪ - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಪ್ರಕಾಶಕರಲ್ಲಿ ಮನವಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ಕನ್ನಡ ಪುಸ್ತಕ ಪ್ರಕಾಶಕರಲ್ಲಿ ಮನವಿ

ಪ್ರಕಟಿತ ವರ್ಷ : 12 May 2022 03:42 pm

ಮಾನ್ಯರೇ,

ಕಳೆದ ಮಾರ್ಚ್‌-31-2022ರಂದು ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಶ್ರೀ ವಿ. ಸುನಿಲ್‌ ಕುಮಾರ್‌ ಅವರ ಸಾಹಿತಿ / ಕಲಾವಿದರುಗಳ ದತ್ತಾಂಶ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿರುತ್ತಾರೆ. ಕನ್ನಡ ಪುಸ್ತಕ ಪ್ರಕಾಶಕರೂ ಸಹ ತಮ್ಮ ಸ್ವವಿವರಗಳನ್ನು ದಾಖಲಿಸುವ ಮೂಲಕ ಈ ದತ್ತಾಂಶ ಸಂಗ್ರಹ ಕಾರ್ಯಕ್ಕೆ ಸಹಕಾರ ನೀಡಬೇಕೆಂದು ಈ ಮೂಲಕ ಕೋರಲಾಗಿದೆ.

ಈ ದತ್ತಾಂಶ ಸಂಗ್ರಹದಿಂದಾಗಿ ಕರ್ನಾಟಕ ಸರ್ಕಾರ ನೀಡುವ ಯೋಜನೆಗಳ ಸೌಲಭ್ಯಗಳನ್ನು ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ನಿಮಗೆ ತಲುಪಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಈ ದತ್ತಾಂಶ ಸಂಗ್ರಹ ಅತ್ಯಂತ ಪ್ರಾಮುಖ್ಯತೆ ಪಡೆದಿದೆ.

ಆನ್‌ಲೈನ್‌ನಲ್ಲಿ ಸೇವಾ ಸಿಂಧು ಮೂಲಕ ಎಲ್ಲ ಸಾಹಿತಿಗಳ / ಕಲಾವಿದರು / ಪ್ರಕಾಶಕರು ತಮ್ಮ ದತ್ತಾಂಶವನ್ನು ದಾಖಲಿಸಬಹುದಾಗಿದೆ. ಪ್ರಕಾಶಕರು ತಮ್ಮ ಮಾಹಿತಿಯನ್ನು ಸಾಹಿತಿಗಳ Folderನಲ್ಲಿರುವ “ಇತರೆ” ಎಂಬ ಕಾಲಂನಲ್ಲಿ ದಾಖಲಿಸಲು ಕೋರಲಾಗಿದೆ. ಸಂಪರ್ಕಿಸ ಬೇಕಾದ ಸೇವಾ ಸಿಂಧು ಪೋರ್ಟಲ್‌ ವಿಳಾಸ sevasindhu.karnataka.gov.in ಅರ್ಜಿಯ ಮಾದರಿ ಮತ್ತು ದಾಖಲಿಸಬೇಕಾದ ವಿಧಾನಗಳನ್ನು ಕುರಿತ ಪೂರ್ಣವಿವರಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ತಮಗೆ ಕಳುಹಿಸಿಕೊಡಲಾಗಿದೆ.

ತಾವು ದಯವಿಟ್ಟು ತಮ್ಮ ವೈಯಕ್ತಿಕ ಮಾಹಿತಿ ಮತ್ತು ಪ್ರಕಾಶನ ಸಂಸ್ಥೆಯ ವಿವರಗಳನ್ನು ಈ ಸೇವಾ ಸಿಂಧು ಪೋರ್ಟಲ್‌ನಲ್ಲಿ  ದಾಖಲಿಸಲು ಕೋರಲಾಗಿದೆ. ತಮ್ಮ ವಾಟ್ಸಪ್‌ ಗ್ರೂಪ್‌ಗಳಲ್ಲೂ ಈ ಕುರಿತು ವ್ಯಾಪಕ ಪ್ರಚಾರ ನೀಡಲು ವಿನಂತಿಸಿದೆ.

ಹೆಚ್ಚಿನ ಮಾಹಿತಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಣಜ ಸಮನ್ವಾಯಾಧಿಕಾರಿ ಶ್ರೀ ರಮೇಶ್‌ ಇವರ ಸಂಪರ್ಕ ಸಂಖ್ಯೆ: 9900534569 - ಇವರನ್ನು ಸಂಪರ್ಕಿಸಬಹುದಾಗಿದೆ.

 

(ಕೆ.ಬಿ. ಕಿರಣ್‌ ಸಿಂಗ್‌)

ಆಡಳಿತಾಧಿಕಾರಿ

© 2022, ಕನ್ನಡ ಪುಸ್ತಕ ಪ್ರಾಧಿಕಾರ