ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ಪುಸ್ತಕ ನೀತಿ ರಚನೆಗಾಗಿ ಸಾರ್ವಜನಿಕ ಸಲಹೆ, ಸೂಚನೆ ಅಭಿಪ್ರಾಯ ಆಹ್ವಾನ

ಪ್ರಕಟಿತ ವರ್ಷ : 13 Aug 2021 07:30 pm

ಕನ್ನಡ ಪುಸ್ತಕ ಲೋಕ ಆಧುನಿಕ ಎಲೆಕ್ಟ್ರಾನಿಕ್ ಮಾಧ್ಯಮದ ನೂತನ ಆವಿಷ್ಕಾರಗಳ ಫಲವಾಗಿ ಹೆಚ್ಚು ವಿಸ್ತಾರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪುಸ್ತಕೋದ್ಯಮ ದ ಎಲ್ಲಾ ಸಾಧ್ಯತೆ ಮತ್ತು ಸವಾಲುಗಳನ್ನು ಹೊಸ ದೃಷ್ಟಿಕೋನದಿಂದ ನೋಡುವ ಅವಶ್ಯಕತೆ ಇರುವುದರಿಂದ ಕನ್ನಡ ಪುಸ್ತಕ ನೀತಿಯನ್ನು ಪುನರ್ ರಚಿಸಲು ಕನ್ನಡ ಪುಸ್ತಕ ಪ್ರಾಧಿಕಾರ ನಿರ್ಧರಿಸಿದೆ.
ಇ-ಬುಕ್ ,ಆಡಿಯೋ ಬುಕ್ ಅನ್ನು ಒಳಗೊಂಡಂತೆ ಎಲೆಕ್ಟ್ರಾನಿಕ್ ಪುಸ್ತಕೋದ್ಯಮದ ಸಾಧಕ-ಬಾದಕಗಳನ್ನು ಹಾಗೂ ಕನ್ನಡ ಪುಸ್ತಕ ಲೋಕದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಈ ಪುಸ್ತಕ ನೀತಿ ರಚನೆ ಆಗಬೇಕು ಎನ್ನುವುದು ಪ್ರಾಧಿಕಾರದ ಆಶಯವಾಗಿದೆ. ಪುಸ್ತಕೋದ್ಯಮಕ್ಕೆ ಸಂಬಂಧಿಸಿದ ಬರಹಗಾರ,ಪ್ರಕಾಶಕ, ಓದುಗ, ಮತ್ತು ಮಾರಾಟಗಾರರ ಜೊತೆಗೆ ಪುಸ್ತಕ ಲೋಕದಲ್ಲಿ ಕೆಲಸ ಮಾಡುವರ ಹಿತವನ್ನು ಕಾಪಾಡಲು ಈ ನೀತಿಯಲ್ಲಿ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ.

ಆದ್ದರಿಂದ ನಾಡಿನ ಯಾವುದೇ ಬರಹಗಾರರು, ಚಿಂತಕರು, ಓದುಗರು ಮತ್ತು ಪ್ರಕಾಶಕರು ಹಾಗೂ ಆಸಕ್ತ ಸಾರ್ವಜನಿಕರು ಪುಸ್ತಕಲೋಕಕ್ಕೆ ಸಂಬಂಧಿಸಿದಂತೆ ಅನುಷ್ಠಾನ ಮಾಡಬಹುದಾದ ಯಾವುದೇ ರೀತಿಯ ಸಲಹೆ ,ಸೂಚನೆಗಳನ್ನು ನೀಡಬಹುದಾಗಿದೆ.

ತಮ್ಮ ಅಭಿಪ್ರಾಯಗಳನ್ನು ಅಂಚೆ ಮೂಲಕ

ಆಡಳಿತಾಧಿಕಾರಿ
ಕನ್ನಡ ಪುಸ್ತಕಪ್ರಾಧಿಕಾರ
ಕನ್ನಡ ಭವನ, ಜೆ ಸಿ ರಸ್ತೆ
ಬೆಂಗಳೂರು -560002
ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ.
ಅಥವಾ ಕನ್ನಡ ಪುಸ್ತಕ ಪ್ರಾಧಿಕಾರದ ಮಿಂಚಂಚೆ kannadappradhikaara@gmail.com ಇದಕ್ಕೂ ಕಳುಹಿಸಬಹುದಾಗಿದೆ.
ತಮ್ಮ ಅಭಿಪ್ರಾಯಗಳನ್ನು ಆಗಸ್ಟ್ 30- 2021ರ ಒಳಗೆ ಕಳುಹಿಸಲು ಕೋರಿದೆ.

ಕೆ. ಬಿ. ಕಿರಣ್ ಸಿಂಗ್
ಆಡಳಿತಾಧಿಕಾರಿ
ಕನ್ನಡ ಪುಸ್ತಕ ಪ್ರಾಧಿಕಾರ

© 2021, ಕನ್ನಡ ಪುಸ್ತಕ ಪ್ರಾಧಿಕಾರ