ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:

ಸಂತಾಪ

ಪ್ರಕಟಿತ ವರ್ಷ : 14 Dec 2020 12:52 pm

ಕನ್ನಡದ ಹಿರಿಯ ವಿದ್ವಾಂಸ, ಸಾಹಿತಿ, ಸಂಶೋಧಕ, ಪದ್ಮಶ್ರೀ. ಬನ್ನಂಜೆ ಗೋವಿಂದಾಚಾರ್ಯ ಅವರ ನಿಧನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಎಂ ಎನ್ ನಂದೀಶ್ ಹಂಚೇ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಬಹುಭಾಷಾ ವಿಶಾರದ ಬನ್ನಂಜೆ ಗೋವಿಂದಾಚಾರ್ಯ ಅವರು ಈ ನಾಡಿನ ಭೌದ್ಧಿಕ ಆಸ್ತಿಯಾಗಿದ್ದರು. ೧೬೦ ಕ್ಕೂ ಹೆಚ್ಚು ಕೃತಿ ರಚನೆ ಮಾಡಿದ್ದ ಅವರು ನೀಡಿದ್ದ ಅಸಂಖ್ಯ ವಿದ್ವತ್ ಪೂರ್ಣವಾದ ಉಪನ್ಯಾಸಗಳು ಜಗತ್ಪ್ರಸಿದ್ಧವಾಗಿದ್ದವು.

ಅವರ ನಿಧನದಿಂದ ಈ ನಾಡು ಶ್ರೇಷ್ಠ ಸಾಂಸ್ಕೃತಿಕ ಚಿಂತಕರನ್ನು ಕಳೆದುಕೊಂಡಂತಾಗಿದೆ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

© 2021, ಕನ್ನಡ ಪುಸ್ತಕ ಪ್ರಾಧಿಕಾರ