ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಸಂತಾಪ - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಪ್ರಕಾಶಕರಲ್ಲಿ ಮನವಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ

ಪ್ರಕಟಿತ ವರ್ಷ : 08 Nov 2020 11:00 pm

 

ಪುಸ್ತಕ ಪ್ರಾಧಿಕಾರದ ಪುಸ್ತಕಗಳನ್ನು ಕೊಂಡುಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

⦁ ಮೊದಲಿಗೆ www.kannadapustakapradhikara.com ತಾಣಕ್ಕೆ ಭೇಟಿ ನೀಡಿ.
⦁ ಪುಸ್ತಕ ಕೊಂಡುಕೊಳ್ಳಲು ಒಂದು ಖಾತೆಯನ್ನು ಹೊಂದಿರಬೇಕಾಗಿದೆ. ಅದಕ್ಕಾಗಿ ಪುಸ್ತಕ ಪ್ರಾಧಿಕಾರದ ಲೋಗೋ ಮೇಲಿರುವ ನೊಂದಾಯಿಸು ಎಂಬ ಲಿಂಕ್ ಕ್ಲಿಕ್ ಮಾಡಿ.
⦁ ನಂತರ ತೆರೆದಿರುವ ಪುಟದಲ್ಲಿ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ, ಪಿನ್ ಕೋಡ್ ಹಾಗೂ ಇತರೆ ವಿವರಗಳನ್ನು ಭರ್ತಿ ಮಾಡಿ.
⦁ ವಿಸೂ.: ಇಲ್ಲಿ ಭರ್ತಿ ಮಾಡುವ ಎಲ್ಲಾ ವಿವರಗಳನ್ನು ಇಂಗ್ಲೀಷ್‌ನಲ್ಲಿಯೇ ಹಾಕಿ.
⦁ ಹೊಸ ಖಾತೆ ತೆರೆದ ನಂತರ ಅದೇ ಇ-ಮೇಲ್ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.
⦁ ಈ ಮೊದಲೇ ಪುಸ್ತಕಗಳನ್ನು ಆಯ್ಕೆ ಮಾಡಿದ್ದರೆ ನಿಮ್ಮ ಬುಟ್ಟಿಯಲ್ಲಿ ಪುಸ್ತಕಗಳ ವಿವರ ಸಿಗುತ್ತದೆ.
⦁ ಇಲ್ಲವಾದರೆ ನಿಮಗೆ ಬೇಕಾದ ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡು "ಹೆಚ್ಚಿನ ಮಾಹಿತಿ" ಬಟನ್ ಒತ್ತಿ ನಂತರ "ಖರೀದಿಸಿ" ಮೇಲೆ ಕ್ಲಿಕ್ ಮಾಡಿ.
⦁ ನಂತರ ಇನ್ನೂ ಹಲವು ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
⦁ ಪುಸ್ತಕಗಳನ್ನು ಆಯ್ಕೆ ಮಾಡಿದ ನಂತರ "View Cart" ಮೇಲೆ ಕ್ಲಿಕ್ ಮಾಡಿ.
⦁ ನೀವು ಆಯ್ಕೆ ಮಾಡಿರುವ ಪುಸ್ತಕಗಳಲ್ಲಿ ಯಾವುದಾದರೂ ಪುಸ್ತಕ ಬೇಡವೆಂದರೆ "Cart" ನಲ್ಲಿರುವ ಪುಸ್ತಕಗಳ "x" ಮೇಲೆ ಕ್ಲಿಕ್ ಮಾಡಿದರೆ ಆಯ್ಕೆ ಮಾಡಿರುವ ಪುಸ್ತಕ Cart ಇಂದ ಹೋಗುತ್ತದೆ.
⦁ ನೀವು ಈ ಮೊದಲೇ ನಿಮ್ಮ ಖಾತೆಯನ್ನು ಬಳಸಿ ಲಾಗಿನ್ ಆಗಿರುವುದರಿಂದ ನಿಮ್ಮ ಪಿನ್ ಕೋಡ್ ಆದಾರದ ಮೇಲೆ ಅಂಚೆ ವೆಚ್ಚದೊಂದಿಗೆ ಒಟ್ಟು ಮೊತ್ತ ಎಷ್ಟು ಆಗುತ್ತದೆ ಎಂಬ ಮಾಹಿತಿ ಸಿಗುತ್ತದೆ.
⦁ ಪುಸ್ತಕದ ಆಯ್ಕೆ ಮುಗಿದಿದ್ದರೆ "ಆನ್‌ಲೈನ್ ಪಾವತಿ" ಮೇಲೆ ಕ್ಲಿಕ್ ಮಾಡಿ.
⦁ ಆನ್‌ಲೈನ್ ಪಾವತಿಗಾಗಿ ಸಿಸಿ ಅವಿನ್ಯೂ ಪುಟಕ್ಕೆ ತೆರಳುತ್ತದೆ. ನಿಮ್ಮ ವಿಳಾಸದ ಪಟ್ಟಣ ಮತ್ತು ರಾಜ್ಯವನ್ನು ಭರ್ತಿ ಮಾಡಿ ಕೆಳಗೆ ನಮೂದಿಸಿರುವ (ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ UPI) ಆಯ್ಕೆಯೊಂದಿಗೆ ಹಣವನ್ನು ಪಾವತಿಸಿ.
⦁ ಹಣವನ್ನು ಪಾವತಿಸಿದ ನಂತರ ಕೆಲ ಸೆಕೆಂಡುಗಳವರೆಗೆ ಕಾಯಿರಿ ನಂತರ ಸಿಸಿ ಅವಿನ್ಯೂ ಪುಟದಿಂದ ಕನ್ನಡ ಪುಸ್ತಕ ಪ್ರಾಧಿಕಾರದ ಪುಟಕ್ಕೆ ತೆರಳುತ್ತದೆ. ಅಲ್ಲಿ ಆರ್ಡರ್ ಸಂಖ್ಯೆಯೊAದಿಗೆ ನೀವು ಆಯ್ಕೆ ಮಾಡಿರುವ ಪುಸ್ತಕಗಳ ವಿವರ ಸಿಗುತ್ತದೆ.
⦁ ಖಾತೆ ತೆರೆಯುವಾಗ ನೀವು ನೀಡಿರುವ ಈ ಮೇಲ್ ವಿಳಾಸಕ್ಕೆ ಸಿಸಿ ಅವಿನ್ಯೂ ಕಡೆಯಿಂದ ನೀವು ಪಾವತಿ ಮಾಡಿರುವ ವಿವರದ ಇ-ಮೇಲ್ ಬಂದಿರುತ್ತದೆ.
⦁ ಇನ್ನು ಕೆಲ ನಿಮಿಷಗಳಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಕಡೆಯಿಂದ ಆರ್ಡರ್ ಸಂಖ್ಯೆಯೊAದಿಗೆ ನೀವು ಆಯ್ಕೆ ಮಾಡಿರುವ ಪುಸ್ತಕಗಳ ವಿವರ ಸಿಗುತ್ತದೆ.

ಸುಮಾರು ೭ - ೮ ದಿನಗಳಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಕಡೆಯಿಂದ ಪೋಸ್ಟ್ ಮೂಲಕ ಪುಸ್ತಕಗಳು ನಿಮ್ಮ ವಿಳಾಸಕ್ಕೆ ತಲುಪುತ್ತವೆ.


ಧನ್ಯವಾದಗಳು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಕನ್ನಡ ಪುಸ್ತಕ ಪ್ರಾಧಿಕಾರ
ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-೫೬೦೦೦೨
ದೂರವಾಣಿ : ೦೮೦-೨೨೧೦೭೭೦೪

© 2022, ಕನ್ನಡ ಪುಸ್ತಕ ಪ್ರಾಧಿಕಾರ