ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಸಂತಾಪ - ಹೆಚ್ಚಿನ ಮಾಹಿತಿಗೆ | ಚೊಚ್ಚಲ ಕೃತಿಗೆ ಧನಸಹಾಯಕ್ಕಾಗಿ ಅರ್ಜಿ ಆಹ್ವಾನ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕಳುಹಿಸುವುದು ಅನಿವಾರ್ಯವಾಗಿ ತಡವಾಗುತ್ತಿರುವ ಬಗ್ಗೆ - ಹೆಚ್ಚಿನ ಮಾಹಿತಿಗೆ | ವಿವಿಧ ಬಹುಮಾನಗಳಿಗಾಗಿ ಅರ್ಜಿ ಆಹ್ವಾನ - ಹೆಚ್ಚಿನ ಮಾಹಿತಿಗೆ |

ಸುದ್ದಿ ಸಮಾಚಾರ

ಸಂತಾಪ

18 Jan 2022 11:31 am

ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರರ ಪತ್ನಿ ಸತ್ಯಭಾಮ ಅವರು ವಿಧಿವಶರಾಗಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.

...


ಚೊಚ್ಚಲ ಕೃತಿಗೆ ಧನಸಹಾಯಕ್ಕಾಗಿ ಅರ್ಜಿ ಆಹ್ವಾನ

17 Jan 2022 11:57 am

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2021ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಹಸ್ತಪ್ರತಿಗಳ ಪ್ರಕಟಣೆಗೆ ರೂ.15,000-00 ಗಳ ಪ್ರೋತ್ಸಾಹಧನ ನೀಡಲಾಗುವುದು. ಅರ್ಜಿದಾರರು 18 ರಿಂದ 40 ವರ್ಷ ವಯೋಮಿತಿಯವರಾಗಿರಬೇಕು. ಸ್ವ-ವಿವರವುಳ್ಳ ಮನವಿಯೊಂದಿಗೆ ದೃಢೀಕೃತ ಎಸ್.ಎಸ್.ಎಲ್.ಸಿ. ಪ್ರಮಾಣ ಪತ್ರದ ಪ್ರತಿ ಅಥವಾ ಅಧಿಕೃತವಾದ, ದೃಢೀಕರಿಸಲ್ಪಟ್ಟ ಜನ್ಮದಾಖಲಾತಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕು. ಅಲ್ಲದೆ ಪ್ರಸ್ತುತ ಸಲ್ಲಿಸಲ್ಪಡುತ್ತಿರುವ ಕೃತಿಯು ತಮ್ಮ ಚೊಚ್ಚಲ ಕೃತಿಯಾಗಿದ್ದು,...


ಪುಸ್ತಕಗಳನ್ನು ಕಳುಹಿಸುವುದು ಅನಿವಾರ್ಯವಾಗಿ ತಡವಾಗುತ್ತಿರುವ ಬಗ್ಗೆ

16 Jan 2022 06:02 pm

ಮನವಿ

ರಾಜ್ಯದಲ್ಲಿ ಕೋವಿಡ್-2019ರ ರೂಪಾಂತರ ವೈರೆಸ್ ‘ಒಮಿಕ್ರಾನ್’ ವೈರಾಣು ಸೋಂಕು ಸಂಬಂಧ ಸರ್ಕಾರದ ಮಾರ್ಗಸೂಚಿಯಂತೆ ಸಿಬ್ಬಂದಿಗಳು ಶೇಕಡಾ 50 ರಂತೆ ಹಾಜರಾಗುತ್ತಿರುವ ಕಾರಣ ಆನ್‍ಲೈನ್ ಮೂಲಕ ಕೊಂಡುಕೊಂಡ ಪುಸ್ತಕಗಳನ್ನು ಕಳುಹಿಸುವುದು ಅನಿವಾರ್ಯವಾಗಿ ತಡವಾಗುತ್ತಿದೆ.

ಪುಸ್ತಕಗಳು ಪುಸ್ತಕಾಸಕ್ತರಿಗೆ ಸಕಾಲದಲ್ಲಿ ತಲುಪಬೇಕೆಂಬುದು ಪ್ರಾಧಿಕಾರದ ಆಶಯ ಹಾಗೂ ಕಾಳಜಿ. ಆದರೆ ಪ್ರಸ್ತುತ ಪರಿಸ್ಥಿತಿಯ ಗಂಭೀರತೆಯಿಂದಾಗಿ ವಿಳಂಬವಾಗುತ್ತಿದೆ. ಸಾಧ್ಯವಾದಷ್ಟು ಬೇಗ ಪುಸ್ತಕಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ದಯವಿಟ್ಟು ಪುಸ್ತಕಾಸಕ್ತರು ಸಹಕರಿಸಬೇಕಾಗಿ ಕೋರಿದೆ.

...


ವಿವಿಧ ಬಹುಮಾನಗಳಿಗಾಗಿ ಅರ್ಜಿ ಆಹ್ವಾನ

10 Jan 2022 05:35 pm

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ, ಜನವರಿ 2021 ರಿಂದ ಡಿಸೆಂಬರ್ 2021ರ ಅವಧಿಯಲ್ಲಿ ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ, ಮುಖಪುಟ ವಿನ್ಯಾಸ, ಗುಣಮಟ್ಟವನ್ನು ಪರಿಗಣಿಸಿ ವಿವಿಧ ಬಹುಮಾನಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಕೃತಿಗಳ ಪ್ರಕಾಶಕರು / ಮುದ್ರಕರು / ಕಲಾವಿದರಿಗೆ ‘ಕನ್ನಡ ಪುಸ್ತಕ ಸೊಗಸು-2021’ ಬಹುಮಾನವನ್ನು ನೀಡಲಾಗುವುದು.


ಆಸಕ್ತ ಪ್ರಕಾಶಕರು /ಮುದ್ರಕರು/ ಕಲಾವಿದರು / ಲೇಖಕರುಗಳು ಸ್ವಯಂ ಅರ್ಜಿ ಸಲ್ಲಿಸಬಹುದಾಗಿದೆ, ಪುಸ್ತಕದ ಹೆಸರು, ಲೇಖಕರ ಹೆಸರು, ಪ್ರಕಟವಾದ ವರ್ಷ,...


ಚಂಪಾ ಅವರ ನಿಧನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ತೀವ್ರ ಸಂತಾಪ ವ್ಯಕ್ತ ಪಡಿಸುತ್ತದೆ

10 Jan 2022 12:49 pm

ಕನ್ನಡದ ಹಿರಿಯ ಸಾಹಿತಿ, ಪ್ರಸಿದ್ಧ ಅಂಕಣಕಾರ, ಕನ್ನಡಪರ ಹೋರಾಟಗಾರ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಅವರ ನಿಧನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ತೀವ್ರ ಸಂತಾಪ ವ್ಯಕ್ತ ಪಡಿಸುತ್ತದೆ.

ಅವರಿಗೆ ನಮ್ಮ ಗೌರವಪೂರ್ವಕ ನಮನಗಳು.

 

...


ಪುಸ್ತಕಗಳನ್ನು ಕಳುಹಿಸುವುದು ಅನಿವಾರ್ಯವಾಗಿ ತಡವಾಗುತ್ತಿರುವ ಬಗ್ಗೆ

10 Jan 2022 12:40 pm

ಮನವಿ

ರಾಜ್ಯದಲ್ಲಿ ಕೋವಿಡ್-2019ರ ರೂಪಾಂತರ ವೈರೆಸ್ ‘ಒಮಿಕ್ರಾನ್’ ವೈರಾಣು ಸೋಂಕು ಸಂಬಂಧ ಸರ್ಕಾರದ ಮಾರ್ಗಸೂಚಿಯಂತೆ ಸಿಬ್ಬಂದಿಗಳು ಶೇಕಡಾ 50 ರಂತೆ ಹಾಜರಾಗುತ್ತಿರುವ ಕಾರಣ ಆನ್‍ಲೈನ್ ಮೂಲಕ ಕೊಂಡುಕೊಂಡ ಪುಸ್ತಕಗಳನ್ನು ಕಳುಹಿಸುವುದು ಅನಿವಾರ್ಯವಾಗಿ ತಡವಾಗುತ್ತಿದೆ.

ಪುಸ್ತಕಗಳು ಪುಸ್ತಕಾಸಕ್ತರಿಗೆ ಸಕಾಲದಲ್ಲಿ ತಲುಪಬೇಕೆಂಬುದು ಪ್ರಾಧಿಕಾರದ ಆಶಯ ಹಾಗೂ ಕಾಳಜಿ. ಆದರೆ ಪ್ರಸ್ತುತ ಪರಿಸ್ಥಿತಿಯ ಗಂಭೀರತೆಯಿಂದಾಗಿ ವಿಳಂಬವಾಗುತ್ತಿದೆ. ಸಾಧ್ಯವಾದಷ್ಟು ಬೇಗ ಪುಸ್ತಕಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ದಯವಿಟ್ಟು ಪುಸ್ತಕಾಸಕ್ತರು ಸಹಕರಿಸಬೇಕಾಗಿ ಕೋರಿದೆ.

...


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಅವರನ್ನು ಭೇಟಿ ಮಾಡಿದ ಕ್ಷಣ

08 Jan 2022 05:17 pm

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಅವರನ್ನು ನೆನ್ನೆ ಕನ್ನಡ ಭವನದ ಅವರ ಕಚೇರಿಯಲ್ಲಿ ಭೇಟಿ ಮಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ. ಎನ್. ನಂದೀಶ್ ಹಂಚೆ, ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಹಾಗೂ ಪ್ರಾಧಿಕಾರದ ಸದಸ್ಯ ಪ್ರಕಾಶ್ ಕಂಬತ್ತಳ್ಳಿ ಅವರು ಸಮಗ್ರ ವಚನ ಸಂಪುಟದ ಪ್ರತಿಗಳನ್ನು ಹಾಗೂ ಸ್ಮರಣ ಕಾಣಿಕೆಯನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಇತ್ತೀಚಿನ ಪ್ರಕಟಣೆಗಳ ಬಗ್ಗೆ...


ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ – ೨೦೨೦ ಹಾಗೂ ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ

06 Jan 2022 03:52 pm

 
ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ – ೨೦೨೦ ಹಾಗೂ ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ
 
ದಿನಾಂಕ: ೦೭.೦೧.೨೦೨೨, ಬೆಳಿಗ್ಗೆ ೧೧.೦೦
ಸ್ಥಳ : ನಯನ ರಂಗಮಂದಿರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು
 
ಉದ್ಘಾಟನೆ ಹಾಗೂ...


ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಣೆ

06 Jan 2022 03:32 pm

ಕನ್ನಡ ಪುಸ್ತಕ ಪ್ರಾಧಿಕಾರ ದಿನಾಂಕ:30.12.2021ರಂದು ತನ್ನ ಹೊಸ ಪ್ರಕಟಣೆಗಳನ್ನು ಲೋಕಾರ್ಪಣೆ ಮಾಡಿದೆ. ಈ ಪುಸ್ತಕಗಳು ಈಗ ಮಾರಾಟಕ್ಕೆ ಲಭ್ಯವಿದೆ. ಸಮಗ್ರ ವಚನ ಸಂಪುಟಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರಕಟಣೆಗಳು 31-ಜನವರಿ-2022ರ ವರೆಗೆ ಶೇಕಡಾ 50% ರಿಯಾಯಿತಿ ದರದಲ್ಲಿ ದೊರೆಯುತ್ತದೆ.

 

 

 

ಸಮಗ್ರ ವಚನ ಸಂಪುಟ

15 ಸಂಪುಟಗಳು

ಪ್ರಧಾನ ಸಂಪಾದಕರು

ಡಾ. ಎಂ.ಎಂ. ಕಲಬುರ್ಗಿ

ಪರಿಷ್ಕೃತ ಆವೃತ್ತಿಯ

ಸಂಪಾದಕರು

ಡಾ. ವೀರಣ್ಣ ರಾಜೂರ

ಎಲ್ಲಾ ಸಂಪುಟಗಳ

ಒಟ್ಟು ಬೆಲೆ ರೂ.2,000-00

 


ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ

01 Jan 2022 05:44 pm

ಗಣರಾಜ್ಯೋತ್ಸವದ ಅಂಗವಾಗಿ 2022ರ ಜನವರಿ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇಖಡಾ 50%ರ ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುವುದು. ಪುಸ್ತಕ ಪ್ರಿಯರು ಈ ಅವಕಾಶ ಬಳಸಿಕೊಳ್ಳಲು ಕೋರಿದೆ. ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಹಾಗೂ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಸಿರಿಗನ್ನಡ...


ಸಾರಸ್ವತ ಚಿಂತನೆಗೆ ಭಿನ್ನಾಭಿಪ್ರಾಯಗಳು ಮುಳ್ಳಾಗಬಾರದು: ಮಲ್ಲೇಪುರಂ ಜಿ. ವೆಂಕಟೇಶ್

30 Dec 2021 04:23 pm

ಬೆಂಗಳೂರು ಡಿಸೆಂಬರ್ 30 - ಸಾರಸ್ವತ ಲೋಕದ ಭಿನ್ನಾಭಿಪ್ರಾಯಗಳು ಕನ್ನಡ ಸಾಹಿತ್ಯ ಸಂವರ್ಧನೆಗೆ ಅಡ್ಡಿಯಾಗಿವೆ. ಕನ್ನಡ ಸಾರಸ್ವತ ಲೋಕ ಶ್ರೀಮಂತವಾಗಬೇಕಾದರೆ ಪೂರ್ವಗ್ರಹಗಳಿಂದ ಸಾಹಿತಿಗಳು ಮುಕ್ತರಾಗಬೇಕು ಮತ್ತು ಮುಕ್ತ ಚಿಂತನೆಯತ್ತ ಚಿತ್ತ ಹರಿಸಬೇಕು ಎಂದು ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಹೇಳಿದ್ದಾರೆ.

ಅವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನಗಳನ್ನು ಪ್ರದಾನ ಮಾಡುವ ಮತ್ತು ನೂತನ ಕೃತಿಗಳ ಲೋಕಾರ್ಪಣೆ...


ವಿವಿಧ ವಾರ್ಷಿಕ ಪ್ರಶಸ್ತಿ ಮತ್ತು ಬಹುಮಾನ ಪ್ರದಾನ ಸಮಾರಂಭ - ೨೦೨೦ ಹಾಗೂ ಕೃತಿಗಳ ಲೋಕಾರ್ಪಣೆ

29 Dec 2021 07:28 am

ಕನ್ನಡ ಪುಸ್ತಕ ಪ್ರಾಧಿಕಾರ ದಿನಾಂಕ:30.12.2021ರಂದು ಗುರುವಾರ ನಯನ ರಂಗಮಂದಿರದಲ್ಲಿ ಬೆಳಿಗ್ಗೆ 11.00ಗಂಟೆಗೆ ಆಯೋಜಿಸಿರುವ 2020ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನ ಪ್ರದಾನ ಹಾಗೂ ಪ್ರಾಧಿಕಾರದ ನೂತನ ಪ್ರಕಟಣೆಗಳ ಲೋಕಾರ್ಪಣೆ ಸಮಾರಂಭವನ್ನು ಸಾರ್ವಜನಿಕರಿಗೆ ಮತ್ತು ಪುಸ್ತಕಾಸಕ್ತರಿಗೆ ಯೂಟ್ಯೂಬ್‌ ಹಾಗೂ ಫೇಸ್‌ಬುಕ್‌ ಲೈವ್‌ ಮೂಲಕ ಕಾರ್ಯಕ್ರಮವನ್ನು ವೀಕ್ಷಿಸಲು ಸಹ ಅವಕಾಶ ಕಲ್ಪಿಸಲಾಗಿದೆ.

ನೇರಪ್ರಸಾರದ ಲಿಂಕ್‌ :

Youtube: https://youtu.be/2XVvOQVamnw

Facebook : https://fb.me/e/3rT3o7tXN

ಕಾರ್ಯಕ್ರಮದ ಯಶಸ್ಸಿಗಾಗಿ ತಮ್ಮೆಲ್ಲರ ಸಹಕಾರ ಕೋರಿದೆ.


ಶ್ರೀಮತಿ ಮಾತ ಮಂಜಮ್ಮ ಜೋಗತಿ ಅವರಿಗೆ ಗೌರವಿಸಿದ ಕ್ಷಣ...

22 Dec 2021 03:42 pm

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಮಾತ ಮಂಜಮ್ಮ ಜೋಗತಿ ಅವರನ್ನು ಇಂದು ಅವರ ಕಚೇರಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಗೌರವಿಸಲಾಯಿತು.

...


ಡಾ. ಬಿ.ಎಂ. ಹೆಗ್ಗಡೆಯವರಿಗೆ ಡಾ. ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ ಪ್ರದಾನ

18 Dec 2021 03:43 pm

ಡಾ. ಬಿ.ಎಂ. ಹೆಗ್ಗಡೆಯವರಿಗೆ ಡಾ. ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ ಪ್ರದಾನ

ಕನ್ನಡ ಪುಸ್ತಕ ಪ್ರಾಧಿಕಾರದ 2019ನೇ ಸಾಲಿನ ಡಾ. ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿಯನ್ನು ಡಾ. ಬಿ.ಎಂ. ಹೆಗ್ಗಡೆ ಅವರಿಗೆ ಮಂಗಳೂರಿನ ಅವರ ನಿವಾಸದಲ್ಲಿ ಡಿ.17ರ ಶುಕ್ರವಾರ ಪ್ರಧಾನ ಮಾಡಲಾಯಿತು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ....


ವಿವಿಧ ವಾರ್ಷಿಕ ಪ್ರಶಸ್ತಿ ಮತ್ತು ಬಹುಮಾನ ಪ್ರದಾನ ಸಮಾರಂಭ - ೨೦೨೦ ಹಾಗೂ ಕೃತಿಗಳ ಲೋಕಾರ್ಪಣೆ

16 Dec 2021 03:05 pm

ವಿಶೇಷ ಸೂಚನೆ: ಕರ್ನಾಟಕ ಸರ್ಕಾರ ದಿನಾಂಕ:22.12.2021ರಂದು ಕೋವಿಡ್‌-2019 ಹಾಗೂ ಒಮಿಕ್ರಾನ್‌ ನಿಯಂತ್ರಣ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿರುತ್ತದೆ. ಈ ಮಾರ್ಗ ಸೂಚಿಯನ್ನು ಗಮನದಲ್ಲಿರಿಸಿಕೊಂಡು ಕನ್ನಡ ಪುಸ್ತಕ ಪ್ರಾಧಿಕಾರ ದಿನಾಂಕ:30.12.2021ರಂದು ಗುರುವಾರ ನಯನ ರಂಗಮಂದಿರದಲ್ಲಿ ಬೆಳಿಗ್ಗೆ 11.00ಗಂಟೆಗೆ ಆಯೋಜಿಸಿರುವ 2020ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನ ಪ್ರದಾನ ಹಾಗೂ ಪ್ರಾಧಿಕಾರದ ನೂತನ ಪ್ರಕಟಣೆಗಳ ಲೋಕಾರ್ಪಣೆ ಸಮಾರಂಭವನ್ನು ವರ್ಚುವಲ್‌ ಮೂಲಕ ಆಯೋಜಿಸಲು ತೀರ್ಮಾನಿಸಲಾಗಿದೆ. ಸಾರ್ವಜನಿಕರಿಗೆ ಮತ್ತು ಪುಸ್ತಕಾಸಕ್ತರಿಗೆ ಯೂಟ್ಯೂಬ್‌ ಹಾಗೂ...


ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ

04 Nov 2021 11:48 am

ಕನ್ನಡ ರಾಜ್ಯೋತ್ಸವದ ಅಂಗವಾಗಿ 2021ರ ನವೆಂಬರ್‌ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇಖಡಾ 50%ರ ರಿಯಾಯಿತಿ ದರಗಳಲ್ಲಿ  ಮಾರಾಟ ಮಾಡಲಾಗುವುದು. ಪುಸ್ತಕ ಪ್ರಿಯರು ಈ ಅವಕಾಶ ಬಳಸಿಕೊಳ್ಳಲು ಕೋರಿದೆ. ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಹಾಗೂ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಸಿರಿಗನ್ನಡ ಪುಸ್ತಕ...


ಮಳಿಗೆಗಳ ಬಾಡಿಗೆ ಮೊತ್ತ ಕಡಿತ

25 Oct 2021 07:37 pm

ಕನ್ನಡಕ್ಕಾಗಿ ನಾವು ಅಭಿಯಾನದ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮಹೋತ್ಸವದ ಮಳಿಗೆಗಳ ಬಾಡಿಗೆ ಮೊತ್ತ ಕಡಿತ

“ಕನ್ನಡಕ್ಕಾಗಿ ನಾವು” ವಿಶೇಷ ಅಭಿಯಾನದ ಸಂದರ್ಭದಲ್ಲಿ ದಿನಾಂಕ: 29-10-2021 ರಿಂದ 02-11-2021ರವರೆಗೆ ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮಹೋತ್ಸವ, ಸಾಂಪ್ರದಾಯಿಕ ಉಡುಗೆ ತೊಡಿಗೆ, ದೇಸೀಯ ಆಹಾರ ಮೇಳ, ಚಿತ್ರಕಲೆ / ಶಿಲ್ಪಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ರವೀಂದ್ರ ಕಲಾಕ್ಷೇತ್ರದ ಆವರಣ, ಜೆ.ಸಿ.ರಸ್ತೆ, ಬೆಂಗಳೂರು -ಇಲ್ಲಿ ಆಯೋಜಿಸಲಾಗಿದೆ.

ಪ್ರತೀ ದಿನದ ಮಳಿಗೆ ಬಾಡಿಗೆಯನ್ನು ರೂ.1000-00ಗಳು ಎಂದು...


ಕನ್ನಡಕ್ಕಾಗಿ ನಾವು ವಿಶೇಷ ಅಭಿಯಾನದ ಸಂದರ್ಭದಲ್ಲಿ ಕನ್ನಡ ಪುಸ್ತಕ, ಚಿತ್ರ ಕಲೆ ಮತ್ತು ಶಿಲ್ಪ ಕಲೆ ಪ್ರದರ್ಶನ ಮಳಿಗೆಗೆ ಅರ್ಜಿ ಆಹ್ವಾನ

22 Oct 2021 08:18 pm

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸುತ್ತಿರುವ “ಕನ್ನಡಕ್ಕಾಗಿ ನಾವು” ವಿಶೇಷ ಅಭಿಯಾನದ ಸಂದರ್ಭದಲ್ಲಿ ದಿನಾಂಕ 29-10-2021 ರಿಂದ 02-11-2021ರವರೆಗೆ ಐದು ದಿನಗಳ ಕಾಲ ಕನ್ನಡ ಪುಸ್ತಕ, ಚಿತ್ರ ಕಲೆ ಮತ್ತು ಶಿಲ್ಪ ಕಲೆಗಳ ಪ್ರದರ್ಶನ ಹಾಗೂ ರಿಯಾಯಿತಿ ಮಾರಾಟ ಮಹೋತ್ಸವ ವನ್ನು ರವೀಂದ್ರ ಕಲಾಕ್ಷೇತ್ರದ ಆವರಣ, ಜೆ.ಸಿ.ರಸ್ತೆ, ಬೆಂಗಳೂರು - ಇಲ್ಲಿ ಏರ್ಪಡಿಸಲಾಗುವುದು.

ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ಪ್ರಕಾಶಕರು/ಮಾರಾಟಗಾರರು ನಿಗದಿತ ಅರ್ಜಿ ನಮೂನೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ,...


2020ನೇ ಸಾಲಿನಲ್ಲಿ ಆಯ್ಕೆಯಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ

21 Aug 2021 06:20 pm

ಕ್ರ. ಸಂ.

ಶ್ರೀ / ಶ್ರೀಮತಿ

ಕೃತಿ

1.              

ರಜಿಯಾ ಬೇಗಂ ಕೆ. ಭಾವಿಕಟ್ಟಿ, ಕೊಪ್ಪಳ

ಅಂಕುರ…… (ಭರವಸೆಯ ಹಾದಿಯಲ್ಲಿ)

2.             

ಫರ್ಹಾನಾಜ್ ಮಸ್ಕಿ, ಜಿ| ತುಮಕೂರು

ಮೌನ ಮನದ ಮಾತುಗಳು

3.             

ಶ್ರೀಮತಿ ವಿದ್ಯಾರೆಡ್ಡಿ, ಬೆಳಗಾವಿ ಜಿಲ್ಲೆ

ಅಂದಗಾತಿ

4.           ...


ಪುಸ್ತಕ ನೀತಿ ರಚನೆಗಾಗಿ ಸಾರ್ವಜನಿಕ ಸಲಹೆ, ಸೂಚನೆ ಅಭಿಪ್ರಾಯ ಆಹ್ವಾನ

13 Aug 2021 07:30 pm

ಕನ್ನಡ ಪುಸ್ತಕ ಲೋಕ ಆಧುನಿಕ ಎಲೆಕ್ಟ್ರಾನಿಕ್ ಮಾಧ್ಯಮದ ನೂತನ ಆವಿಷ್ಕಾರಗಳ ಫಲವಾಗಿ ಹೆಚ್ಚು ವಿಸ್ತಾರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪುಸ್ತಕೋದ್ಯಮ ದ ಎಲ್ಲಾ ಸಾಧ್ಯತೆ ಮತ್ತು ಸವಾಲುಗಳನ್ನು ಹೊಸ ದೃಷ್ಟಿಕೋನದಿಂದ ನೋಡುವ ಅವಶ್ಯಕತೆ ಇರುವುದರಿಂದ ಕನ್ನಡ ಪುಸ್ತಕ ನೀತಿಯನ್ನು ಪುನರ್ ರಚಿಸಲು ಕನ್ನಡ ಪುಸ್ತಕ ಪ್ರಾಧಿಕಾರ ನಿರ್ಧರಿಸಿದೆ.
ಇ-ಬುಕ್ ,ಆಡಿಯೋ ಬುಕ್ ಅನ್ನು ಒಳಗೊಂಡಂತೆ ಎಲೆಕ್ಟ್ರಾನಿಕ್ ಪುಸ್ತಕೋದ್ಯಮದ ಸಾಧಕ-ಬಾದಕಗಳನ್ನು ಹಾಗೂ ಕನ್ನಡ ಪುಸ್ತಕ ಲೋಕದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಈ ಪುಸ್ತಕ ನೀತಿ...ನಮ್ಮ ವಿಳಾಸ

ಕನ್ನಡ ಪುಸ್ತಕ ಪ್ರಾಧಿಕಾರ

ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-೫೬೦೦೦೨
ದೂರವಾಣಿ : ೦೮೦-೨೨೧೦೭೭೦೪
kannadappradhikara@gmail.com

© 2022, ಕನ್ನಡ ಪುಸ್ತಕ ಪ್ರಾಧಿಕಾರ