ಅಲ್ಪಾವಧಿ ಟೆಂಡರ್ ಪ್ರಕಟಣೆ (ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮುಖಾಂತರ ಮಾತ್ರ) ಬಗ್ಗೆ.

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಕನಕದಾಸರ ಸಚಿತ್ರ ಕಥಾ ಮಾಲಿಕೆಯಡಿ ೬ ಪುಸ್ತಕಗಳನ್ನು ಮುದ್ರಿಸುವ ಸಲುವಾಗಿ ಮುದ್ರಣದ ಸೌಲಭ್ಯ ಹೊಂದಿರುವ ವಿವಿಧ ನೋಂದಾಯಿತ ಮುದ್ರಣಾಲಯ / ಸಂಸ್ಥೆಗಳಿಂದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮೂಲಕ ನಿಗಧಿತ ನಮೂನೆಯಲ್ಲಿ ೨ ಬಿಡ್ ವಿಧಾನದಲ್ಲಿ ಇ-ಟೆಂಡರ್ ಆಹ್ವಾನಿಸಲಾಗಿದೆ.

ಅಲ್ಪಾವಧಿ ಟೆಂಡರ್‌ಗೆ ಇಟ್ಟಿರುವ ಮೊತ್ತ ರೂ.೭.೦೦ಲಕ್ಷಗಳು, ನಿಗದಿ ಪಡಿಸಿಸಲಾದ ಇ.ಎಂ.ಡಿ. ಮೊತ್ತ ರೂ.೫೦,೦೦೦-೦೦ಗಳು. ಇ-ಟೆಂಡರ್ ಫಾರಂಗಳನ್ನು https://eproc.karnataka.gov.in ನಲ್ಲಿ ಪಡೆದು ಕೊಳ್ಳಬಹುದು.

  • ೧)ಇ-ಟೆಂಡರ್ ಫಾರಂಗಳನ್ನು ದಿನಾಂಕ:೦೭.೦೨.೨೦೧೭ ರಿಂದ ೨೦.೦೨.೨೦೧೭ರವರೆಗೆ ಪಡೆದುಕೊಳ್ಳಬಹುದು.
  • ೨)ಇ-ಟೆಂಡರ್ ತುಂಬಲು ಕೊನೆಯ ದಿನಾಂಕ: ೨೧.೦೨.೨೦೧೭.
  • ೩)ಇ-ಟೆಂಡರ್‌ನ್ನು ದಿನಾಂಕ೨೩.೦೨.೨೦೧೭ರಂದು ಸಂಜೆ ೫.೦೫ಕ್ಕೆ ತೆರೆಯಲಾಗುವುದು.

ಹೆಚ್ಚಿನ ಮಾಹಿತಿಗಾಗಿ :
ಆಡಳಿತಾಧಿಕಾರಿಗಳು,
ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ,
ಮೊದಲನೇ ಮಹಡಿ, ಜೆ.ಸಿ.ರಸ್ತೆ,
ಬೆಂಗಳೂರು-೫೬೦ ೦೦೨ -
ವೆಬ್ ಸೈಟ್ www.kannadapustakapradhikara.com
ದೂರವಾಣಿ ಸಂಖ್ಯೆ: ೦೮೦-೨೨೪೮೪೫೧೬ / ೨೨೧೦೭೭೦೪ - ಇಲ್ಲಿ ಸಂಪರ್ಕಿಸಬಹುದಾಗಿದೆ.

ಪ್ರಕಟಿತ ಪುಸ್ತಕಗಳು
ಚಿತ್ರಗಳು