ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳ-೨೦೧೭ ಅರ್ಜಿ ಆಹ್ವಾನ

ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ವತಿಯಿಂದ ಉತ್ತರ ಕನ್ನಡ ಜಿಲ್ಲೆ, ಶಿರಸಿಯ ನಗರ ಸಭೆಯ ವಿಕಾಸಾಶ್ರಮ ಬಯಲಿನ ಆವರಣದಲ್ಲಿ ದಿನಾಂಕ:೦೯.೦೨.೨೦೧೭ ರಿಂದ ೧೩.೦೨.೨೦೧೭ರ ವರೆಗೆ ಹಾಗೂ ದಿನಾಂಕ:೧೮.೦೨.೨೦೧೭ ರಿಂದ ೨೨.೦೨.೨೦೧೭ರ ವರೆಗೆ ಯಾದಗಿರಿ ನಗರದ ವಿದ್ಯಾಮಂಗಲ ಕಾರ್ಯಾಲಯ ಆವರಣದಲ್ಲಿ ಒಟ್ಟು ಐದು ದಿನಗಳವರೆಗೆ ’ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳ-೨೦೧೭’ನ್ನು ಹಮ್ಮಿಕೊಳ್ಳಲಾಗಿದೆ.

ಈ ಪುಸ್ತಕ ಮೇಳದಲ್ಲಿ ಪ್ರಕಾಶನ ಸಂಸ್ಥೆಗಳು/ಪ್ರದರ್ಶಕರು ಭಾಗವಹಿಸಬಹುದಾಗಿದ್ದು, ಮಳಿಗೆಯೊಂದಕ್ಕೆ ರೂ.೧,೦೦೦-೦೦ಗಳ ಬಾಡಿಗೆ ಹಾಗೂ ರೂ.೧,೦೦೦-೦೦ಗಳ ಭದ್ರತಾ ಠೇವಣಿ ಡಿ.ಡಿ.ಯನ್ನು ಪ್ರತ್ಯೇಕ-ಪ್ರತ್ಯೇಕವಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು - ಅವರ ಹೆಸರಿನಲ್ಲಿ ಸಲ್ಲಿಸುವುದು. ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ಪ್ರಕಾಶಕರು/ಪ್ರದರ್ಶಕರು ನಿಗದಿತ ಅರ್ಜಿ ನಮೂನೆಯನ್ನು ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರಿನ ಕಛೇರಿ ಅಥವಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಅಂದರೆ www.kannadapustakapradhikara.comನಲ್ಲಿ ಅರ್ಜಿಯನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

ಭರ್ತಿಮಾಡಿದ ಅರ್ಜಿಯನ್ನು ಡಿ.ಡಿ.ಯೊಂದಿಗೆ ಶಿರಸಿಯಲ್ಲಿ ನಡೆಯುವ ಪುಸ್ತಕ ಮೇಳಕ್ಕೆ ದಿನಾಂಕ೦೭.೦೨.೨೦೧೭ರೊಳಗೆ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ನಡೆಯುವ ಪುಸ್ತಕ ಮೇಳಕ್ಕೆ ದಿನಾಂಕ: ೧೬.೦೨.೨೦೧೭ರೊಳಗೆ ಸಂಜೆ ೪.೦೦ ಗಂಟೆಯೊಳಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-ಇವರಿಗೆ ಸಲ್ಲಿಸಲು ಕೋರಿದೆ. ಆದ್ಯತೆಯ ಮೇರೆಗೆ ಮಳಿಗೆಗಳನ್ನು ಹಂಚಿಕೆ ಮಾಡಲಾಗುವುದು.

ಪ್ರಕಟಿತ ಪುಸ್ತಕಗಳು
ಚಿತ್ರಗಳು