ಅಲ್ಪಾವಧಿ ಟೆಂಡರ್ ಪ್ರಕಟಣೆ (ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮುಖಾಂತರ ಮಾತ್ರ)

ಕನ್ನಡ ಪುಸ್ತಕ ಪ್ರಾಧಿಕಾರವು ’ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳ-೨೦೧೬’ನ್ನು ದಿನಾಂಕ: ೨೪.೧೨.೨೦೧೬ ರಿಂದ ೨೮.೧೨.೨೦೧೬ರವರೆಗೆ ೫ ದಿನಗಳ ಕಾಲ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಮತ್ತು ಜನವರಿ ಮಾಹೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಏರ್ಪಡಿಸಲಾಗಿದ್ದು ಈ ಮೇಳಗಳಲ್ಲಿ ಸುಮಾರು ೩೬೦*೪೦ ಚದರ ಅಡಿ ವಿಸ್ತಾರಕ್ಕೆ ಸುತ್ತಲೂ ಹಾಗೂ ಮೇಲ್ಛಾವಣಿಗೆ ಜೆಂಕ್ ಶೀಟ್ ಅಳವಡಿಸಿ, ಪೆಂಡಾಲನ್ನು(Super Structure Pendal) ನಿರ್ಮಾಣ ಮಾಡಿ, ಪೆಂಡಾಲ್ ಒಳಭಾಗದಲ್ಲಿ ಸೀಲಿಂಗಿಗೆ ಶುಭ್ರವಾದ ಬಿಳಿಬಟ್ಟೆಯನ್ನು ಅಳವಡಿಸುವುದು. ಸಂಪೂರ್ಣ ಮೇಳದ ಆವರಣಕ್ಕೆ ಹಸಿರು ಕಾರ್ಪೆಟ್ ಹಾಸಿ, ಪೆಂಡಾಲ್ ಒಳಭಾಗದಲ್ಲಿ ೧೦*೧೦ ಅಳತೆಯಲ್ಲಿ ಸುಮಾರು ೬೫ ರಿಂದ ೭೦ ಮಳಿಗೆಗಳನ್ನು (Actomen Stalls) ನಿರ್ಮಿಸಬೇಕಾಗಿದೆ. ಪ್ರತಿ ಮಳಿಗೆಗೆ ೨ ಟ್ಯೂಬ್‌ಲೈಟ್, ೨ ಕುರ್ಚಿ, ಪುಸ್ತಕ ಪ್ರದರ್ಶನಕ್ಕೆ ಯೋಗ್ಯವಾದ ೪ ಟೇಬಲ್, ಪ್ರತಿ ಮಳಿಗೆಯ ದ್ವಾರಗಳನ್ನು ಮುಚ್ಚಲು ಪರದೆ ವ್ಯವಸ್ಥೆ, ಪ್ರತಿ ಮಳಿಗೆಯ ಮುಂದೆ ನಾಮಫಲಕಕ್ಕೆ ಒಂದೂವರೆ ಅಡಿ ಅಗಲದ ಫ್ರೇಂ ಅಳವಡಿಸಿರಬೇಕು.೩೦ ಹಾಲೋಜಿನ್ ಬಲ್ಫ್ (ಮುರ್ಕ್ಯುರಿ), ೩೦ ಸೀಲಿಂಗ್ ಫ್ಯಾನ್, ಮುಂತಾದ ಕಾರ್ಯನಿರ್ವಹಿಸಲು ಅನುಭವಿ, ನೋಂದಾಯಿತ ಮತ್ತು ಅರ್ಹ ಸಂಸ್ಥೆಗಳಿಂದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮೂಲಕ ನಿಗಧಿತ ನಮೂನೆಯಲ್ಲಿ ೨ ಬಿಡ್ ವಿಧಾನದಲ್ಲಿ ಇ-ಟೆಂಡರ್ ಆಹ್ವಾನಿಸಲಾಗಿದೆ. ಅಲ್ಪಾವಧಿ ಟೆಂಡರ್‌ಗೆ ಇಟ್ಟಿರುವ ಅಂದಾಜು ಮೊತ್ತ ೧೬.೦೦ಲಕ್ಷಗಳು, ನಿಗದಿ ಪಡಿಸಿದ ಇ.ಎಂ.ಡಿ. ಮೊತ್ತ ರೂ.೪೦,೦೦೦-೦೦ಗಳು.

ಇ-ಟೆಂಡರ್ ಫಾರಂಗಳನ್ನು https://eproc.karnataka.gov.in ನಲ್ಲಿ ಪಡೆದು ಕೊಳ್ಳಬಹುದು. ೧) ಇ-ಟೆಂಡರ್ ಫಾರಂಗಳನ್ನು ದಿನಾಂಕ:೨೬.೧೧.೨೦೧೬ ರಿಂದ ೧೫.೧೨.೨೦೧೬ರವರೆಗೆ ಪಡೆದುಕೊಳ್ಳಬಹುದು. ೨) ಇ-ಟೆಂಡರ್ ತುಂಬಲು ಕೊನೆಯ ದಿನಾಂಕ: ೧೬.೧೨.೨೦೧೬ ೩)ಇ-ಟೆಂಡರ್‌ನ್ನು ದಿನಾಂಕ೧೭.೧೨.೨೦೧೬ರಂದು ಸಂಜೆ ೫.೦೦ಗಂಟೆಗೆ ತೆರೆಯಲಾಗುವುದು.

ಹೆಚ್ಚಿನ ಮಾಹಿತಿಗಾಗಿ : ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-೫೬೦ ೦೦೨ - ವೆಬ್ ಸೈಟ್ www.kannadapustakapradhikara.com ದೂರವಾಣಿ ಸಂಖ್ಯೆ: ೦೮೦-೨೨೪೮೪೫೧೬ / ೨೨೧೦೭೭೦೪ - ಇಲ್ಲಿ ಸಂಪರ್ಕಿಸಬಹುದಾಗಿದೆ.

ಸಹಿ/-

ಆಡಳಿತಾಧಿಕಾರಿ (ಪ್ರ)

ಪ್ರಕಟಿತ ಪುಸ್ತಕಗಳು
ಚಿತ್ರಗಳು