ಕನ್ನಡ ಪುಸ್ತಕ ಸೊಗಸು ಬಹುಮಾನಕ್ಕೆ ಅರ್ಜಿ ಆಹ್ವಾನ

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ, ಜನವರಿ ೨೦೧೫ ರಿಂದ ಡಿಸೆಂಬರ್ ೨೦೧೫ರ ಅವಧಿಯಲ್ಲಿ ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ, ಮುಖಪುಟ ವಿನ್ಯಾಸ, ಗುಣಮಟ್ಟವನ್ನು ಪರಿಗಣಿಸಿ, ಕಲಾವಿದರು / ಲೇಖಕರು / ಪ್ರಕಾಶಕರಿಗೆ ’ಕನ್ನಡ ಪುಸ್ತಕ ಸೊಗಸು-೨೦೧೫’ ಬಹುಮಾನಗಳನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

(ಪ್ರಥಮ, ದ್ವಿತೀಯ, ತೃತೀಯ, ಮಕ್ಕಳ ಪುಸ್ತಕ ಹಾಗೂ ಮುಖಪುಟ ಚಿತ್ರ ಕಲೆಯ ಪ್ರಥಮ, ಮುಖಪುಟ ಚಿತ್ರ ಕಲೆಯ ದ್ವಿತೀಯ ಬಹುಮಾನಗಳು) ಆಸಕ್ತ ಪ್ರಕಾಶಕರು / ಕಲಾವಿದರು / ಲೇಖಕರುಗಳು ಪುಸ್ತಕದ ಹೆಸರು, ಲೇಖಕರ ಹೆಸರು, ಪ್ರಕಟವಾದ ವರ್ಷ, ಪ್ರಕಾಶಕರ ಹೆಸರು, ಮುಖಪುಟ ಚಿತ್ರ ರಚನೆಯ ಕಲಾವಿದರ ಹೆಸರು ಹಾಗೂ ಪ್ರಕಾಶಕರು / ಚಿತ್ರ ಕಲಾವಿದರ ಪೂರ್ಣ ವಿಳಾಸ - ಈ ಎಲ್ಲಾ ವಿವರಗಳೊಂದಿಗೆ ಪುಸ್ತಕದ ಎರಡು ಪ್ರತಿಗಳನ್ನು ದಿನಾಂಕ:೩೧.೦೫.೨೦೧೬ ರೊಳಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-೫೬೦ ೦೦೨ - ಈ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ.

ಪ್ರಕಟಿತ ಪುಸ್ತಕಗಳು
ಚಿತ್ರಗಳು