ಗುಲ್ಬರ್ಗಾ ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳ-2015: ಟೆಂಡರ್ ಪ್ರಕಟಣೆ

ಕನ್ನಡ ಪುಸ್ತಕ ಪ್ರಾಧಿಕಾರವು ‘ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳ-2015’ನ್ನು ದಿನಾಂಕ: 30.09.2015 ರಿಂದ 04.10.2015ರವರೆಗೆ 5 ದಿನಗಳ ಕಾಲ ಗುಲ್ಬರ್ಗಾದಲ್ಲಿ ಏರ್ಪಡಿಸಲಾಗಿದ್ದು, ಈ ಮೇಳದಲ್ಲಿ ಸುಮಾರು 260*40 ಚದರ ಅಡಿ ವಿಸ್ತಾರಕ್ಕೆ ಸುತ್ತಲೂ ಹಾಗೂ ಮೇಲ್ಛಾವಣಿಗೆ ಜೆಂಕ್ ಶೀಟ್ ಅಳವಡಿಸಿ, ಪೆಂಡಾಲನ್ನು (Super Structure Pendal) ನಿರ್ಮಾಣ ಮಾಡಿ, ಪೆಂಡಾಲ್ ಒಳಭಾಗದಲ್ಲಿ ಸೀಲಿಂಗಿಗೆ ಶುಭ್ರವಾದ ಬಿಳಿಬಟ್ಟೆಯನ್ನು ಅಳವಡಿಸುವುದು. ಸಂಪೂರ್ಣ ಮೇಳದ ಆವರಣಕ್ಕೆ ಹಸಿರು ಕಾರ್ಪೆಟ್ ಹಾಸಿ, ಪೆಂಡಾಲ್ ಒಳಭಾಗದಲ್ಲಿ 10*10 ಅಳತೆಯಲ್ಲಿ ಸುಮಾರು 50 ಮಳಿಗೆಗಳನ್ನು (Actomen Stalls) ನಿರ್ಮಿಸಬೇಕಾಗಿದೆ. ಪ್ರತಿ ಮಳಿಗೆಗೆ 2 ಟ್ಯೂಬ್‍ಲೈಟ್, 2 ಕುರ್ಚಿ, ಪುಸ್ತಕ ಪ್ರದರ್ಶನಕ್ಕೆ ಯೋಗ್ಯವಾದ 3 ಟೇಬಲ್, ಪ್ರತಿ ಮಳಿಗೆಯ ದ್ವಾರಗಳನ್ನು ಮುಚ್ಚಲು ಪರದೆ ವ್ಯವಸ್ಥೆ, ಪ್ರತಿ ಮಳಿಗೆಯ ಮುಂದೆ ನಾಮಫಲಕಕ್ಕೆ ಒಂದೂವರೆ ಅಡಿ ಅಗಲದ ಫ್ರೇಂ ಅಳವಡಿಸಿರಬೇಕು. 30 ಹಾಲೋಜಿನ್ ಬಲ್ಫ್ (ಮುಕ್ರ್ಯುರಿ), 30 ಸೀಲಿಂಗ್ ಫ್ಯಾನ್, ಮುಂತಾದ ಕಾರ್ಯನಿರ್ವಹಿಸಲು ಅನುಭವಿ, ನೋಂದಾಯಿತ ಮತ್ತು ಅರ್ಹ ಸಂಸ್ಥೆಗಳಿಂದ ಮೊಹರಾದ ಟೆಂಡರ್‍ಗಳನ್ನು ಆಹ್ವಾನಿಸಲಾಗಿದೆ.

ಟೆಂಡರ್ ಅರ್ಜಿ ನಮೂನೆಗಳನ್ನು ದಿನಾಂಕ:07.09.2015 ರಿಂದ ದಿನಾಂಕ19.09.2015ರವರೆಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560 002 ಇಲ್ಲಿ ಕಛೇರಿ ವೇಳೆಯಲ್ಲಿ ನೀಡಲಾಗುವುದು. ಟೆಂಡರ್ ಅರ್ಜಿನಮೂನೆ ಒಂದಕ್ಕೆ ರೂ.500-00+ತೆರಿಗೆ. ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ:21.09.2015ರಂದು ಸಂಜೆ 4.00 ಗಂಟೆ ಹಾಗೂ ದಿನಾಂಕ:22.09.2015ರಂದು ಮಧ್ಯಾಹ್ನ 3.00 ಗಂಟೆಗೆ ಟೆಂಡರ್ ತೆರೆಯಲಾಗುವುದು. ಯಾವುದೇ ಟೆಂಡರನ್ನು ಸ್ವೀಕರಿಸುವ ಅಥವಾ ಸಂಪೂರ್ಣ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸುವ ಅಧಿಕಾರ ಪ್ರಾಧಿಕಾರ ಹೊಂದಿರುತ್ತದೆ. ಷರತ್ತು ಮತ್ತು ನಿಬಂಧನೆ ಹಾಗೂ ಹೆಚ್ಚಿನ ವಿವರಗಳಿಗೆ ಅರ್ಜಿಯಲ್ಲಿನ ಸೂಚನೆಗಳನ್ನು ಗಮನಿಸುವುದು.

ಹೆಚ್ಚಿನ ಮಾಹಿತಿಗಾಗಿ :
ಆಡಳಿತಾಧಿಕಾರಿಗಳು,
ಕನ್ನಡ ಪುಸ್ತಕ ಪ್ರಾಧಿಕಾರ,
ಕನ್ನಡ ಭವನ, ಜೆ.ಸಿ.ರಸ್ತೆ,
ಬೆಂಗಳೂರು-೫೬೦ ೦೦೨
ದೂ:೦೮೦-೨೨೪೮೪೫೧೬ / ೨೨೧೦೭೭೦೪ ಅನ್ನು ಸಂಪರ್ಕಿಸಬಹುದಾಗಿದೆ.

ಪ್ರಕಟಿತ ಪುಸ್ತಕಗಳು
ಚಿತ್ರಗಳು