ಜಿಲ್ಲಾವಾರು ಸಿರಿಗನಡನ ಪುಸ್ತಕ ಮಾರಾಟ ಮಳಿಗೆ ತೆರೆಯಲು ಅರ್ಜಿ ಆಹ್ವಾನ

ಕನ್ನಡ ಪುಸ್ತಕ ಪ್ರಾಧಿಕಾರವು ಹಮ್ಮಿಕೊಂಡಿರುವ ಹಲವು ಯೋಜನೆಗಳಲ್ಲಿ ಜಿಲ್ಲಾವಾರು ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯೂ ಒಂದು. ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯಾದ್ಯಾಂತ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳನ್ನು ಆರಂಭಿಸುತ್ತಿದೆ. ಜಿಲ್ಲೆ ಅಥವಾ ತಾಲ್ಲೂಕು ಕೇಂದ್ರದಲ್ಲಿ, ಜನನಿಬಿಡ ಪ್ರದೇಶಗಳಲ್ಲಿ, ಕನ್ನಡ ಪುಸ್ತಕ ಪ್ರಾಧಿಕಾರದ ಹೆಸರಿನಲ್ಲಿ ಈ ಮಳಿಗೆಯನ್ನು ಆರಂಭಿಸಲು ಯೋಜಿಸಿದೆ.

ಈಗಾಗಲೇ ಖಾಸಗಿಯಾಗಿ ಪುಸ್ತಕ ಮಾರಾಟ ಮಳಿಗೆಯನ್ನು ಹೊಂದಿದವರೂ ಕೂಡ ಅರ್ಜಿ ಸಲ್ಲಿಸಬಹುದು. ಈ ಮಳಿಗೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಎಲ್ಲ ಅಕಾಡೆಮಿಗಳ ಪುಸ್ತಕಗಳನ್ನು ಹಾಗೂ ಎಲ್ಲ ವಿಶ್ವವಿದ್ಯಾನಿಲಯಗಳ ಪ್ರಸಾರಾಂಗಗಳ ಪುಸ್ತಕಗಳನ್ನು ಅಲ್ಲದೆ ಮೌಲಿಕವಾದ ಕನ್ನಡ ಪುಸ್ತಕಗಳನ್ನು ಮಾರಾಟ ಮಾಡಲು ಅವಕಾಶವಿದೆ. ಪುಸ್ತಕ ಮಳಿಗೆಯ ಬಾಡಿಗೆ ಹಾಗೂ ಮಾರಾಟಗಾರರ ಗೌರವಸಂಭಾವನೆಯಾಗಿ ಮಾಸಿಕ ಒಟ್ಟು ರೂ.೫೦೦೦-೦೦ಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರವು ಪಾವತಿ ಮಾಡುತ್ತದೆ. ಪ್ರಾಧಿಕಾರವು ಆಯ್ಕೆ ಮಾಡಿದ ಮಾರಾಟ ಪ್ರತಿನಿಧಿಯು ರಾಷ್ಟ್ರೀಕೃತ ಬ್ಯಾಂಕ್‌ನ ರೂ.೨೫,೦೦೦-೦೦ಗಳ ಬ್ಯಾಂಕ್ ಗ್ಯಾರಂಟಿ ಪತ್ರವನ್ನು ಮಾರಾಟ ಮಳಿಗೆಯ ಆರಂಭದಲ್ಲಿ ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗುತ್ತದೆ.

ಆಸಕ್ತರು ವಿದ್ಯಾರ್ಹತೆ, ವಯಸ್ಸು, ಮಾರಾಟದ ಸ್ಥಳ, ಮಾರಾಟ ಮಳಿಗೆಯ ವಿವರ ಇತ್ಯಾದಿ ಸ್ವ-ವಿವರಗಳನ್ನು ಒಳಗೊಂಡ ಅರ್ಜಿಯನ್ನು ದಿನಾಂಕ:೧೮.೦೪.೨೦೧೫ರೊಳಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು ಇವರಿಗೆ ಸಲ್ಲಿಸತಕ್ಕದ್ದು.

ನಿಯಮಾವಳಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪ್ರಕಟಿತ ಪುಸ್ತಕಗಳು
ಚಿತ್ರಗಳು