ವಿಶ್ವಪುಸ್ತಕ ದಿನಾಚರಣೆಯ ಅಂಗವಾಗಿ ಕಾರ್ಯಗಾರ

ದಿನಾಂಕ ೨೩.೦೪.೨೦೧೨ರ ಸೋಮವಾರದಂದು ವಿಶ್ವಪುಸ್ತಕ ದಿನಾಚರಣೆಯ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕರ್ನಾಟಕ ಪ್ರಕಾಶಕರ ಸಂಘವು (ರಿ.) ಸಂಯುಕ್ತವಾಗಿ ಕನ್ನಡ ಪುಸ್ತಕೋದ್ಯಮ ಕುರಿತಂತೆ ಯುವ ಪ್ರಕಾಶಕರಿಗಾಗಿ ಒಂದು ದಿನದ ಕಾರ್ಯಗಾರವನ್ನು ಆಯೋಜಿಸಿದೆ. ಈ ಕಾರ್ಯಗಾರದಲ್ಲಿ ಪುಸ್ತಕೋದ್ಯಮದ ನೆಲೆ ಬೆಲೆ, ಪುಸ್ತಕೋದ್ಯಮ ಮತ್ತು ಕಾನೂನುಗಳು, ಪುಸ್ತಕ ನಿರ್ಮಾಣದ ರೂಪುರೇಷೆಗಳು, ಪುಸ್ತಕ ಮಾರಾಟದ ಸಾಧ್ಯತೆಗಳು - ಇವುಗಳನ್ನು ಕುರಿತಂತೆ ವಿದ್ಯಾಂಸರು ಉಪನ್ಯಾಸ ಮತ್ತು ಪ್ರಾತ್ಯಕ್ಷತೆಗಳನ್ನು ನೀಡಲಿದ್ದಾರೆ. ಆಸಕ್ತ ಯುವಕರು/ ಲೇಖಕರು/ ಪ್ರಕಾಶಕರು ದಿನಾಂಕ ೧೭.೦೪.೨೦೧೨ರ ಒಳಗೆ ತಮ್ಮ ಹೆಸರು, ವಿಳಾಸ, ವಿದ್ಯಾರ್ಹತೆ, ಪುಸ್ತಕೋದ್ಯಮದ ಅನುಭವ/ ಸಾಧನೆ ಕುರಿತ ವಿವರಗಳೊಡನೆ ಕಾರ್ಯದರ್ಶಿ ಕರ್ನಾಟಕ ಪ್ರಕಾಶಕರ ಸಂಘ ಅಂಕಿತ ಪುಸ್ತಕ, # ೫೩, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - ೫೬೦೦೦೪ (ದೂರವಾಣಿ ೨೬೬೧೭೭೫೫) ಇವರಲ್ಲಿ ನೋಂದಾಯಿಸಲು ಕೋರಿದೆ. ಸೀಮಿತ ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿರುವುದರಿಂದ ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು.

ಪ್ರಕಟಿತ ಪುಸ್ತಕಗಳು
ಚಿತ್ರಗಳು