ಪ್ರಕಾಶಕರ ನೊಂದಣಿಗಾಗಿ ಅರ್ಜಿ ಆಹ್ವಾನ ಕೊನೆಯ ದಿನಾಂಕ:೧೮.೦೨.೨೦೧೫

ವಿಷಯಕ್ಕೆ ಸಂಬಂಧಿಸಿದಂತೆ, ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದಲ್ಲಿ ಪ್ರಕಟಿತ ಪುಸ್ತಕಗಳ ಹಾಗೂ ಪುಸ್ತಕ ಪ್ರಕಾಶಕರ ವಿವರಗಳು ಒಂದೆಡೆ ಲಭ್ಯವಾದಲ್ಲಿ ಸಾಹಿತ್ಯಾಸಕ್ತರಿಗೆ ಅನುಕೂಲವಾಗುವ ದೃಷ್ಟಿಕೋನದಿಂದ ಪ್ರಕಾಶಕರ ನೋಂದಣಿ ಯೋಜನೆಯೊಂದನ್ನು ಆರಂಭಿಸುತ್ತಿದೆ. ಈ ದಿಸೆಯಲ್ಲಿ ರಾಜ್ಯದೆಲ್ಲೆಡೆಯಲ್ಲಿರುವ ಪ್ರಕಾಶಕರಿಂದ ತಮ್ಮ ಹೆಸರು / ವಿವರಗಳು ಮತ್ತು ತಮ್ಮಿಂದ ಈವರೆಗೆ ಪ್ರಕಟಿತವಾಗಿರುವ ಎಲ್ಲಾ ಪುಸ್ತಕಗಳ ಶೀರ್ಷಿಕೆ, ಪುಟ ಸಂಖ್ಯೆ, ಬೆಲೆ, ರಿಯಾಯಿತಿದರ ಇತ್ಯಾದಿಗಳ ವಿವರಗಳನ್ನು ಹಾಗೂ ಪ್ರಕಾಶನದ ಮುಖ್ಯಸ್ಥರು / ಮಾಲೀಕರು ಅಥವಾ ಆಡಳಿತಾಧಿಕಾರಿಗಳ ಎರಡು ಇತ್ತೀಚಿನ ಸ್ಟಾಂಪ್ ಸೈಜ್ ಭಾವಚಿತ್ರದೊಂದಿಗೆ ಅರ್ಜಿಗಳನ್ನು ಸಲ್ಲಿಸಲು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಕಡ್ಡಾಯವಾಗಿ ಡಿ.ಟಿ.ಪಿ. ಮಾಡಿ ಪ್ರಾಧಿಕಾರದ Email Id: kannadappradhikara@gmail.comಗೆ ಕಳುಹಿಸಲು ಹಾಗೂ ಸದರಿ ಇ-ಮೇಲ್‌ಗೆ ಕಳುಹಿಸಿದ ಮಾಹಿತಿಯನ್ನು ಸಹಿಯೊಂದಿಗೆ ಪ್ರಾಧಿಕಾರಕ್ಕೆ ಸಲ್ಲಿಸಲು ಕೋರಿದೆ. ಅರ್ಜಿ ನಮೂನೆಯನ್ನು ಪ್ರಾಧಿಕಾರದ ವೆಬ್ ಸೈಟ್ http://www.kannadapusthakapradhikara.comನಲ್ಲಿ ಪಡೆಯಬಹುದು. ಅರ್ಜಿ ಸಲ್ಲಿಸಲು ಕಡೆಯ ದಿನಾಂಕ: ೧೮.೦೨.೨೦೧೫.

ಹೆಚ್ಚಿನ ಮಾಹಿತಿಗಾಗಿ : ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು - ದೂರವಾಣಿ ಸಂಖ್ಯೆ: ೦೮೦-೨೨೪೮೪೫೧೬ / ೨೨೦೧೭೭೦೪ - ಇಲ್ಲಿ ಸಂಪರ್ಕಿಸಬಹುದಾಗಿದೆ.

ಪ್ರಕಟಿತ ಪುಸ್ತಕಗಳು
ಚಿತ್ರಗಳು