ಸುದ್ದಿ ಸಮಾಚಾರ:
ಮಕ್ಕಳ ಪುಸ್ತಕ ಮಕ್ಕಳಿಂದ – ಒಂದು ಕಮ್ಮಟ - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳ - ೨೦೧೯ - ಹೆಚ್ಚಿನ ಮಾಹಿತಿಗೆ | 2016ನೇ ಸಾಲಿನ ಸಗಟು ಖರೀದಿ ಯೋಜನೆಯಡಿ ಖರೀದಿಸಲು ಅರ್ಜಿ ನಮೂನೆಗೆ ಕ್ಲಿಕ್ ಮಾಡಿ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

2016ನೇ ಸಾಲಿನ ಸಗಟು ಖರೀದಿ ಯೋಜನೆಯಡಿ ಖರೀದಿಸಲು ಅರ್ಜಿ ನಮೂನೆಗೆ ಕ್ಲಿಕ್ ಮಾಡಿ

ಪ್ರಕಟಿತ ವರ್ಷ : 01 Feb 2019 11:27 am

ಕನ್ನಡ ಪುಸ್ತಕ ಪ್ರಾಧಿಕಾರವು 2016ನೇ ಸಾಲಿನಲ್ಲಿ ಪ್ರಥಮಾವೃತ್ತಿಯಾಗಿ ಮುದ್ರಣಗೊಂಡ ಕನ್ನಡ ಪುಸ್ತಕಗಳನ್ನು ಪ್ರಾಧಿಕಾರದ ಸಗಟು ಖರೀದಿ ಯೋಜನೆಯಡಿ ಖರೀದಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆಯನ್ನು ದಿನಾಂಕ:01.02.2019 ರಿಂದ 28.02.2019ರವರೆಗೆ ಪ್ರಾಧಿಕಾರದ ವೆಬ್‌ಸೈಟ್‌ www.kannadapustakapradhikara.com ಹಾಗೂ ಬೆಂಗಳೂರಿನಲ್ಲಿರುವ ಕನ್ನಡ ಪುಸ್ತಕ ಪ್ರಾಧಿಕಾರದ ಕಚೇರಿ ಮತ್ತು ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕಚೇರಿ ವೇಳೆಯಲ್ಲಿ ಉಚಿತವಾಗಿ, ಖುದ್ದಾಗಿ ಪಡೆದುಕೊಳ್ಳಬಹುದಾಗಿದೆ. ಎರಡು ಪುಸ್ತಕಗಳ ಪ್ರತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು – 560 002 – ಅವರಿಗೆ ದಿನಾಂಕ:28.02.2019ರಂದು ಸಂಜೆ 5.00ಗಂಟೆಯೊಳಗೆ ಸಲ್ಲಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ : ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು –  ವೆಬ್‌ಸೈಟ್‌ : www.kannadapustakapradhikara.com, ದೂರವಾಣಿ ಸಂಖ್ಯೆ: 080-22484516 / 22017704 – ಇಲ್ಲಿ ಸಂಪರ್ಕಿಸಬಹುದಾಗಿದೆ.