ಸುದ್ದಿ ಸಮಾಚಾರ:
ಅತ್ಯುತ್ತಮ ಸೇವೆಗಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಸಿಬ್ಬಂದಿ ಶ್ರೀ ಲಕ್ಷ್ಮಣ್ ರವರನ್ನು ಸನ್ಮಾನಿಸಲಾಯಿತು - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳು 50%ರ ರಿಯಾಯಿತಿಯಲ್ಲಿ.... - ಹೆಚ್ಚಿನ ಮಾಹಿತಿಗೆ | ದನಿ ಹೊತ್ತಿಗೆ - ಹೆಚ್ಚಿನ ಮಾಹಿತಿಗೆ | ಇ-ಪುಸ್ತಕ - ಹೆಚ್ಚಿನ ಮಾಹಿತಿಗೆ |

ಕನ್ನಡ ಪುಸ್ತಕ ಮುದ್ರಣ ಸೊಗಸು-2017

ಪ್ರಕಟಿತ ವರ್ಷ : 14 Aug 2018 02:46 pm

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ, ಜನವರಿ 2017 ರಿಂದ ಡಿಸೆಂಬರ್ 2017 ಅವಧಿಯಲ್ಲಿ ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ ಗುಣಮಟ್ಟವನ್ನು ಪರಿಗಣಿಸಿ ಮುದ್ರಕರಿಗೆ ಕನ್ನಡ ಪುಸ್ತಕ ಮುದ್ರಣ ಸೊಗಸು-2017’ ಬಹುಮಾನವನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮುದ್ರಕರು ಸ್ವಯಂ ಅರ್ಜಿ ಸಲ್ಲಿಸಬಹುದಾಗಿದೆ, ಪುಸ್ತಕದ ಹೆಸರು, ಲೇಖಕರ ಹೆಸರು, ಪ್ರಕಟವಾದ ವರ್ಷ, ಮುದ್ರಕರ ಹೆಸರು ಎಲ್ಲಾ ವಿವರಗಳೊಂದಿಗೆ ಪುಸ್ತಕದ ಎರಡು ಪ್ರತಿಗಳನ್ನು ದಿನಾಂಕ:27.08.2018 ರೊಳಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560 002 – ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ.  ತಾವು ನೀಡಿದ ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ.