ಸುದ್ದಿ ಸಮಾಚಾರ:
ಟೆಂಡರ್ ಪ್ರಕಟಣೆ - ಹೆಚ್ಚಿನ ಮಾಹಿತಿಗೆ | ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಸಾಹಿತಿಗಳಿಗೆ ಕೃತಿ ಪ್ರಕಟಣೆಗಾಗಿ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಸಾಹಿತಿಗಳಿಗೆ ಕೃತಿ ಪ್ರಕಟಣೆಗಾಗಿ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ಪ್ರಕಟಿತ ವರ್ಷ : 07 Jul 2018 11:39 am

ಕನ್ನಡ ಪುಸ್ತಕ ಪ್ರಾಧಿಕಾರವು ಪರಿಶಿಷ್ಟ ಜಾತಿ ಸಾಹಿತಿಗಳ ಕೃತಿ ಪ್ರಕಟಣೆಗೆ ತಲಾ ರೂ.35,000-00ಗಳ ಪ್ರೋತ್ಸಾಹಧನ ನೀಡುವ ಯೋಜನೆ ರೂಪಿಸಿದ್ದು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿದಾರರು ಕಡ್ಡಾಯವಾಗಿ ತಮ್ಮ ಆರ್‍.ಡಿ. ನಂಬರ್‍ ಇರುವ ಜಾತಿ ಪ್ರಮಾಣ ಪತ್ರದೊಂದಿಗೆ A4 ಸೈಜ್ ಹಾಳೆಯಲ್ಲಿ ಡಿ.ಟಿ.ಪಿ. ಮಾಡಿದ ಕನಿಷ್ಟ 200 ಪುಟಗಳಿರುವ ಕೃತಿಯನ್ನು ಸಲ್ಲಿಸಬಹುದಾಗಿದೆ. ಈಗಾಗಲೇ ಸಾಹಿತ್ಯ ಕೃತಿಗಳು ಪ್ರಕಟವಾಗಿರುವ ಲೇಖಕರೂ ಕೂಡ ಅರ್ಜಿ ಸಲ್ಲಿಸಲು ಅವಕಾಶವಿದೆ. 18 ವರ್ಷ ಮೇಲ್ಪಟ್ಟ ಯಾವುದೇ ಲೇಖಕರೂ ಕೂಡ ಅರ್ಜಿಗಳನ್ನು ಸಲ್ಲಿಸಬಹುದು. ಆಯ್ಕೆಗಾಗಿ ಸಲ್ಲಿಸುವ ಹಸ್ತಪ್ರತಿಯು ಸೃಜನಶೀಲ, ಸೃಜನೇತರ ಸಾಹಿತ್ಯವಾಗಿರಬೇಕು. ಅನುವಾದಗಳನ್ನು, ಪಠ್ಯ ಪುಸ್ತಕಗಳನ್ನು ಹಾಗೂ ಬೇರಾವುದೇ ಪದವಿಗಾಗಿ ಸಿದ್ಧಪಡಿಸಿರುವ ಪ್ರಬಂಧಗಳನ್ನು ಪರಿಗಣಿಸಲಾಗುವುದಿಲ್ಲ.

ಪ್ರಾಧಿಕಾರಕ್ಕೆ ಸಲ್ಲಿಸಲ್ಪಡುವ ಅರ್ಜಿಗಳನ್ನು/ ಹಸ್ತಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ. ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು – 560 002 - ಈ ವಿಳಾಸಕ್ಕೆ ದಿನಾಂಕ:21.07.2018ರ ಒಳಗಾಗಿ ಅರ್ಜಿ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗಾಗಿ :
ಆಡಳಿತಾಧಿಕಾರಿಗಳು,
ಕನ್ನಡ ಪುಸ್ತಕ ಪ್ರಾಧಿಕಾರ,
ಕನ್ನಡ ಭವನ, ಮೊದಲನೇ ಮಹಡಿ,
ಜೆ.ಸಿ.ರಸ್ತೆ, ಬೆಂಗಳೂರು  
ವೆಬ್ ಸೈಟ್ : www.kannadapustakapradhikara.com
ದೂರವಾಣಿ ಸಂಖ್ಯೆ: 080-22484516 / 22017704  ಇಲ್ಲಿ ಸಂಪರ್ಕಿಸಬಹುದಾಗಿದೆ.