ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಶೋಕ ಸಂದೇಶ - ಹೆಚ್ಚಿನ ಮಾಹಿತಿಗೆ | ವಿವಿಧ ಪುಸ್ತಕಗಳ ಟೆಂಡರ್ ಪ್ರಕಟಣೆ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ | ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ |

ಪುಸ್ತಕ ಕೊಳ್ಳುವ ಬಗೆ...

ಪ್ರಕಟಿತ ವರ್ಷ : 19 Jan 2018 05:32 pm

ಕನ್ನಡ ಪುಸ್ತಕ ಪ್ರಾಧಿಕಾರದ ಅಂತರ್ಜಾಲ ತಾಣಕ್ಕೆ ಸ್ವಾಗತ. ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳನ್ನು ಆನ್ ಲೈನ್ ಮೂಲಕ ಕೊಂಡು ಕೊಳ್ಳುವ ವಿಧಾನ. 

ಮೊದಲಿಗೆ ನಮ್ಮ ತಾಣವಾದhttp://kannadapustakapradhikara.com ಗೆ ಭೇಟಿ ನೀಡಿ. 

ನಂತರ ಅಲ್ಲಿರುವ (ನಮ್ಮ ಪ್ರಕಟಣೆಗಳು) ಎಂಬ ವಿಭಾಗವನ್ನು ಕ್ಲಿಕ್ ಮಾಡಿ. 

ನಂತರ ನಿಮಗೆ ಬೇಕಾದ ಪುಸ್ತಕಗಳನ್ನು ಆರಿಸಿಕೊಳ್ಳಲು ಅಲ್ಲಿರುವ "ಎಲ್ಲಾ ಪುಸ್ತಕಗಳುಎನ್ನುವ ಬಟನ್ ಕ್ಲಿಕ್ ಮಾಡಿ.

 ಅಲ್ಲಿ ನಿಮಗೆ ಬೇಕಾದ ಪುಸ್ತಕವನ್ನು ಆರಿಸಿಕೊಳ್ಳಿ. ನಿಮಗೆ ಬೇಕಾದ ಪುಸ್ತಕ ಅಲ್ಲಿ ಕಾಣಿಸದಿದ್ದರೆ ಅದರ ಹೆಸರಿನ ಮೂಲಕ ಅಲ್ಲಿ "ನಿಮಗೆ ಬೇಕಾದ ಪುಸ್ತಕ ಹುಡುಕಿ"  ಎಂಬ ಸರ್ಚ್ ಬಾಕ್ಸಿನಲ್ಲಿ ಕನ್ನಡದಲ್ಲಿ ಪುಸ್ತಕವನ್ನು ಹುಡುಕಬಹುದು. 

ನಿಮಗೆ ಬೇಕಾದ ಪುಸ್ತಕ(ಗಳನ್ನು)ವನ್ನು ಆರಿಸಿಕೊಂಡ ಮೇಲೆ "ಖರೀದಿಸಿ"  ಎಂಬ ಬಟನ್ ಒತ್ತಿ. ಇನ್ನೂ ಹೆಚ್ಚಿನ ಪುಸ್ತಕಗಳು ನಿಮಗೆ ಬೇಕಿದ್ದರೆ "ಒಂದನ್ನು ಸೇರಿಸಿ"  ಎಂಬ ಬಟನ್ ಮೂಲಕ ಮತ್ತಷ್ಟು ಪುಸ್ತಕಗಳನ್ನು ಸೇರಿಸಬಹುದು. 

 ಪುಸ್ತಕಗಳ ಆಯ್ಕೆ ಆದ ಮೇಲೆ "ಬೇಡಿಕೆ ಸಲ್ಲಿಸಿ ಎಂಬ ಬಟನ್ ಒತ್ತಿ..

ನಂತರ ನೀವೀಗಾಗಲೇ ನಮ್ಮ ತಾಣದಲ್ಲಿ ನೋಂದಾಯಿಸಿದ್ದರೆ ಅದರ user name ಮತ್ತು password ಬಳಸಿ ಲಾಗಿನ್ ಆಗಿ. 

ಇಲ್ಲವಾದರೆ "ಹೊಸ ಖಾತೆ ತೆರೆಯಿರಿ"  ಕ್ಲಿಕ್ ಮಾಡಿ ನಿಮ್ಮ ಹೆಸರು, ದೂರವಾಣಿ ಸಂಖ್ಯೆ ವಿಳಾಸ ಪಿನ್ ಕೋಡ್ ನೊಂದಿಗೆ ನೋಂದಾಯಿಸಿ ನಿಮ್ಮ ಖಾತೆ ತೆರೆಯಿರಿ. 

ನಂತರ ನೀವು ನೀಡಿದ user name ಮತ್ತು password ಬಳಸಿ ಲಾಗಿನ್ ಆಗಿ.

ಲಾಗಿನ್ ಆದ ಬಳಿಕ ನೀವು ಆಯ್ಕೆ ಮಾಡಿರುವ ಪುಸ್ತಕ, ಅದರ ಬೆಲೆ, ರಿಯಾಯಿತಿ ಮತ್ತು ಅದಕ್ಕೆ ತಗಲುವ ಅಂಚೆ ವೆಚ್ಚದ ವಿವರಗಳೊಂದಿಗೆ ಒಟ್ಟು ಮೊತ್ತ ಸಿದ್ದವಿರುತ್ತದೆ. 

ನಂತರ ಅಲ್ಲಿರುವ "ಆನ್ ಲೈನ್ ಪಾವತಿ" ಬಟನ್ ಒತ್ತಿ. ನಂತರ ಅದು CC Avenue ನವರ ಪೇಮೆಂಟ್ ಗೇಟ್ ವೇ ಪುಟಕ್ಕೆ ಹೋಗುತ್ತದೆ. ಅಲ್ಲಿ ನಿಮ್ಮ ಊರು ಮತ್ತು ರಾಜ್ಯವನ್ನು ನಮೂದಿಸಿ. ನಿಮಗೆ ಸೂಕ್ತವೆನಿಸುವ ಆಯ್ಕೆಯ ಮೂಲಕ ಹಣವನ್ನು ಪಾವತಿ ಮಾಡಿ. 

ಹಣ ಪಾವತಿ ಮಾಡಿದ ನಂತರ ನಿಮ್ಮ Emailಗೆ (ಮಿಂಚಂಚೆಗೆ) ನೀವು ಖರೀದಿಸಿರುವ ವಿವರ ದೊರೆಯುತ್ತದೆ. 

ನೀವು ಆರ್ಡರ್ ಬುಕ್ ಮಾಡಿದ 5- 6 ದಿನಗಳಲ್ಲಿ ಪ್ರಾಧಿಕಾರವು ಅಂಚೆ (ಸ್ಪೀಡ್ ಪೋಸ್ಟ್) ಮೂಲಕ ನಿಮಗೆ ಪುಸ್ತಕಗಳನ್ನು ರವಾನಿಸುತ್ತದೆ. 

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ. 

ಕನ್ನಡ ಪುಸ್ತಕ ಪ್ರಾಧಿಕಾರ

ಕನ್ನಡ ಭವನ,
ಜೆ.ಸಿ.ರಸ್ತೆ, ಬೆಂಗಳೂರು-೫೬೦೦೦೨
ದೂರವಾಣಿ/ಫ್ಯಾಕ್ಸ್ : ೦೮೦-೨೨೪೮೪೫೧೬
Email: kannadapustakapradhikara@gmail.com

 

© 2020, ಕನ್ನಡ ಪುಸ್ತಕ ಪ್ರಾಧಿಕಾರ