ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
2019ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಪ್ರತಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ - ಹೆಚ್ಚಿನ ಮಾಹಿತಿಗೆ | ಇಂದು ಸಮಗ್ರ ವಚನ ಸಾಹಿತ್ಯ ಸಂಪುಟ ಮರು ಮುದ್ರಣ ಕುರಿತ ಸಭೆ ನಡೆಯಿತು - ಹೆಚ್ಚಿನ ಮಾಹಿತಿಗೆ | ಅಭಿಜಾತ ಕನ್ನಡ ಸಾಹಿತ್ಯ ಕಲ್ಯಾಣ ಯೋಜನೆಯ ತಾಂತ್ರಿಕ ಸಲಹಾ ಸಮಿತಿಯ ಸಭೆ - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿನಲ್ಲಿ ಆಯ್ಕೆಯಾದ ಯುವಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ - ಹೆಚ್ಚಿನ ಮಾಹಿತಿಗೆ |

ಕನ್ನಡ ಪುಸ್ತಕ ಪ್ರಾಧಿಕಾರದ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ - ಬಹುಮಾನ ಪ್ರಕಟ

ಪ್ರಕಟಿತ ವರ್ಷ : 07 Oct 2020 08:10 pm

ಡಾ. ಬಸವರಾಜ ಕಲ್ಗುಡಿಯವರಿಗೆ ಡಾ. ಎಂ.ಎಂ. ಕಲಬುರ್ಗಿ ಪ್ರಶಸ್ತಿ

ಕನ್ನಡ ಪುಸ್ತಕ ಪ್ರಾಧಿಕಾರದ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನಗಳಿಗೆ ಅರ್ಹರನ್ನು ಆಯ್ಕೆ ಮಾಡಲಾಗಿದ್ದು, ಹಿರಿಯ ಸಾಹಿತಿ, ಚಿಂತಕ ಡಾ. ಬಸವರಾಜ ಕಲ್ಗುಡಿ ಅವರನ್ನು ಡಾ. ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. 

ಕನ್ನಡ ಪುಸ್ತಕ ಪ್ರಾಧಿಕಾರದಿಂದ ನೀಡಲಾಗುವ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಯನ್ನು ಐಬಿಹೆಚ್‌ ಪ್ರಕಾಶನಕ್ಕೆ ನೀಡಲಾಗಿದೆ.

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರತೀ ವರ್ಷವೂ ನೀಡಲಾಗುವ ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಈ ವರ್ಷ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ಸಿಂಧಗಿಯ ಶ್ರೀ ಎಂ.ಎನ್. ಪಡಶೆಟ್ಟಿ ಹಾಗೂ ಬೆಂಗಳೂರಿನ ಶ್ರೀ ಕೆ. ರಾಜಕುಮಾರ್‍ ಅವರು ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಅನುಪಮ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿಯನ್ನು ಡಾ|| ಬಿ.ಎಂ. ಹೆಗ್ಗಡೆ ಅವರಿಗೆ ನೀಡಲಾಗಿದೆ.

ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ರೂ.1.00 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ ರೂ.75,000-00 ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ರೂ.50,000-00 ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

ಡಾ|| ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ ರೂ.25,000-00 ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. 

ವಾರ್ಷಿಕ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನಗಳಿಗೆ ಈ ಕೆಳಕಂಡಂತೆ ಆಯ್ಕೆ ಮಾಡಲಾಗಿದೆ.

ಬಹುಮಾನ

ಪುರಸ್ಕೃತರು

ಕೃತಿ

ಲೇಖಕರು

ಮೊದಲನೇ ಬಹುಮಾನ

25,000-00

ಸಪ್ನ ಬುಕ್ಹೌಸ್

ಬೆಂಗಳೂರು

ಡಾ. ಬಿ.ಆರ್.‍ ಅಂಬೇಡ್ಕರ್ಮಹಾಮಾನವನ ಮಹಾಯಾನ

ಡಾ. ಸಿ. ಚಂದ್ರಪ್ಪ

ಎರಡನೇ ಬಹುಮಾನ

20,000-00

ನಮ್ಮ ಪ್ರಕಾಶನ

ತುಮಕೂರು

ಭೂಮಿಯೊಂದು ಮಹಾಬೀಜ

ಕೃಷ್ಣಮೂರ್ತಿ ಬಿಳಿಗೆರೆ

ಮೂರನೇ ಬಹುಮಾನ

10,000-00

ಅಭಿರುಚಿ ಪ್ರಕಾಶನ

ಮೈಸೂರು

ಬಂಗಾರದ ಮನುಷ್ಯರು ಭಾಗ-1

ಬೆಳಕಿನ ಬೇಸಾಯದ ಕಥಾನಕ

ಶ್ರೀ ಚಿನ್ನಸ್ವಾಮಿ ವಡ್ಡಗೆರೆ

ಮಕ್ಕಳ ಪುಸ್ತಕ ಸೊಗಸು ಬಹುಮಾನ

8,000-00

ಚೈತ್ರೋದಯ ಪ್ರಕಾಶನ

ಹಾಸನ

ಅರಳುವ ಹೂಗಳು

ಶ್ರೀಮತಿ ಸುಶೀಲಾ ಸೋಮಶೇಖರ್

ಮುಖಪುಟ ಚಿತ್ರ ವಿನ್ಯಾಸ ಬಹುಮಾನ

10,000-00

ಬಹುಮಾನಿತ ಕಲಾವಿದರು:

ಶ್ರೀ ಕಿರಣ್ ಮಾಡಾಲು

ಬೆಂಗಳೂರು

ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ

ಎಸ್. ದಿವಾಕರ್

ಮುಖಪುಟ ಚಿತ್ರ ಕಲೆಯ ಬಹುಮಾನ

8,000-00

ಬಹುಮಾನಿತ ಕಲಾವಿದರು :

ಶ್ರೀ ಪುಂಡಲೀಕ ಕಲ್ಲಿಗನೂರು

 

ಮಹಾವೃಕ್ಷ

ಬಿ.ಆರ್. ಪೋಲೀಸ್‌ಪಾಟೀಲ್

ಪುಸ್ತಕ ಮುದ್ರಣ ಸೊಗಸು ಬಹುಮಾನ

5,000-00

ಮುದ್ರಣಾಲಯ :

ಆಕೃತಿ ಪ್ರಿಂಟ್ಸ್

ಮಂಗಳೂರು

 

ವನ್ಯವರ್ಣ

ಸಂ: ಶ್ರೀ ಗಣೇಶ ಅಮೀನಗಡ

© 2020, ಕನ್ನಡ ಪುಸ್ತಕ ಪ್ರಾಧಿಕಾರ