ಪುಸ್ತಕ ಸೊಗಸು ಮುಖಪುಟ ಚಿತ್ರವಿನ್ಯಾಸ ಬಹುಮಾನ ಪ್ರದಾನ
ಪ್ರಕಟಿತ ವರ್ಷ : 10 Mar 2020 05:46 pm
ಕನ್ನಡ ಪುಸ್ತಕ ಪ್ರಾಧಿಕಾರದ 2018ನೇ ಸಾಲಿನ ಕನ್ನಡ ಪುಸ್ತಕ ಸೊಗಸು ಮುಖಪುಟ ಚಿತ್ರವಿನ್ಯಾಸ ಬಹುಮಾನವನ್ನು ಖ್ಯಾತ ಚಿತ್ರಕಲಾವಿದ ಶ್ರೀ ಕೆ. ಚಂದ್ರನಾಥ ಆಚಾರ್ಯ ಅವರಿಗೆ ಇಂದು ಪ್ರಾಧಿಕಾರದ ಕಚೇರಿಯಲ್ಲಿ ಪ್ರದಾನ ಮಾಡಲಾಯಿತು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಸ್ಮರಣಿಕೆ ಹಾಗೂ ರೂ.10,000-00ಗಳ ನಗದು ಬಹುಮಾನವನ್ನು ವಿತರಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳಾದ ಕೆ.ಬಿ. ಕಿರಣ್ ಸಿಂಗ್ ಹಾಗೂ ಸಹಾಯಕ ನಿರ್ದೇಶಕರಾದ ಸೌಭಾಗ್ಯ ಹಾಜರಿದ್ದರು.