ಸುದ್ದಿ ಸಮಾಚಾರ:
ಪುಸ್ತಕ ಪ್ರಕಾಶನ - ವಿಚಾರ ಸಂಕಿರಣ - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಪ್ರಾಧಿಕಾರವು 5 ಯೋಜನೆಗಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:30.06.2018 - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ಜಾಣ ಜಾಣೆಯರ ಬಳಗಕ್ಕೆ ಅರ್ಜಿ ಆಹ್ವಾನಿಸಿರುವ ಬಗ್ಗೆ

ಪ್ರಕಟಿತ ವರ್ಷ : 29 Dec 2017 08:26 pm

ಕನ್ನಡ ಪುಸ್ತಕ ಪ್ರಾಧಿಕಾರವು ವಿದ್ಯಾರ್ಥಿ ಯುವಜನರನ್ನು ಸಾಹಿತ್ಯಾಭಿರುಚಿಗೆ ಆಕರ್ಷಿಸಲು ಹಾಗೂ ಸಾಹಿತ್ಯದ ಕ್ರಿಯಾಶೀಲತೆಯನ್ನು ಬೆಳೆಸಲು ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರಗಳಲ್ಲಿ ಜಾಣ ಜಾಣೆಯರ ಬಳಗ’ವನ್ನು ರಚಿಸಲು ಅರ್ಜಿಗಳನ್ನು ಆಹ್ವಾನಿಸಿದೆ.ಕನಿಷ್ಟ 5 ರಿಂದ 15 ಮಂದಿ ವಿದ್ಯಾರ್ಥಿಗಳನ್ನೊಳಗೊಂಡಂತೆ ಕಾರ್ಯಕಾರಿ ಸಮಿತಿಯೊಂದನ್ನು ರಚಿಸಿಕೊಂಡು, ಆಯಾ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಕನ್ನಡ ವಿಭಾಗಗಳ ಮುಖ್ಯಸ್ಥರ ಅನುಮೋದನೆಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಕಾಲೇಜಿನಲ್ಲಿ ಕನ್ನಡ ಸಾಹಿತ್ಯಿಕ ವಾತಾವರಣವನ್ನು ಕ್ರಿಯಾಶೀಲವಾಗಿಡುವ ನಿಟ್ಟಿನಲ್ಲಿ ವರ್ಷದಲ್ಲಿ 4 ಕಾರ್ಯಕ್ರಮಗಳಂತೆ ಕನ್ನಡ ಸಾಹಿತ್ಯ ಚಟುವಟಿಕೆಯನ್ನು ಈ ಬಳಗವು ಹಮ್ಮಿಕೊಳ್ಳುತ್ತದೆ. ಇದಕ್ಕಾಗಿ ಪ್ರಾಧಿಕಾರದಿಂದ ಕಾರ್ಯಕ್ರಮ ಒಂದಕ್ಕೆ ರೂ.5,000-00ಗಳ ಗರಿಷ್ಟ ಮಿತಿಯೊಳಗೆ ವಾಸ್ತವಿಕ ವೆಚ್ಚವನ್ನು ಭರಿಸಲಾಗುವುದು. ಇದಲ್ಲದೆ ಪ್ರಾಧಿಕಾರವು ಹಮ್ಮಿಕೊಳ್ಳುವ ಎಲ್ಲಾ ಯೋಜನೆ ಹಾಗೂ ಕಾರ್ಯಕ್ರಮಗಳಲ್ಲಿ ಈ ಜಾಣ ಜಾಣೆಯರ ಬಳಗ’ವನ್ನು ತೊಡಗಿಸಿಕೊಳ್ಳಲಾಗುವುದು. ಅರ್ಜಿ ಸಲ್ಲಿಸಲು ಕಡೆಯ ದಿನಾಂಕ: 20.01.2018.

ನಿಗದಿತ ಅರ್ಜಿ ನಮೂನೆಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯನ್ನು ಅಥವಾ ಕನ್ನಡ ಪುಸ್ತಕ ಪ್ರಾಧಿಕಾರದ ವೆಬ್‍ಸೈಟ್‍ www.kannadapustakapradhikara.com ನಲ್ಲಿ ಅರ್ಜಿಯನ್ನು ಪಡೆಯಬಹುದಾಗಿದೆ.

ಅರ್ಜಿಗಳನ್ನು ದಿನಾಂಕ:20.01.2018ರೊಳಗೆ

ಆಡಳಿತಾಧಿಕಾರಿಗಳು,
ಕನ್ನಡ ಪುಸ್ತಕ ಪ್ರಾಧಿಕಾರ,
ಕನ್ನಡ ಭವನ, ಜೆ.ಸಿ.ರಸ್ತೆ,
ಬೆಂಗಳೂರು – 560 002,
ದೂರವಾಣಿ ಸಂಖ್ಯೆ: 22107704 / 22484516 ಅವರಿಗೆ ಕಳುಹಿಸಿಕೊಡಲು ಕೋರಿದೆ.