ಸುದ್ದಿ ಸಮಾಚಾರ:
ಹೊಸದಾಗಿ ನೇಮಕವಾಗಿ, ಕಚೇರಿಗೆ ಆಗಮಿಸಿದ ಪ್ರಾಧಿಕಾರದ ಅಧ್ಯಕ್ಷರು/ ಸದಸ್ಯರುಗಳನ್ನು ಸ್ವಾಗತಿಸಿದ ಸಂದರ್ಭ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ನೆನಪು ಕಹಿಯಲ್ಲ

ನೆನಪು ಕಹಿಯಲ್ಲ

ಪುಸ್ತಕ ಸೂಚಿ

ಇದೊಂದು ಆತ್ಮಕಥೆ. ಇಂಡಿಯಾದ ಮೊದಲ ಪ್ರಧಾನಿ ನೆಹರೂರವರ ಸೋದರಿ ಶ್ರೀಮತಿ ಕೃಷ್ಣಾ ಹತೀಸಿಂಗ್‌ರು ಈ ಕೃತಿಯಲ್ಲಿ ತಮ್ಮ ಆತ್ಮಕಥನವನ್ನು ಓದುಗರ ಮುಂದೆ ಬಿಚ್ಚಿಡುತ್ತಾ ಸಾಗುತ್ತಾರೆ. ಸ್ವಾತಂತ್ರ್ಯ ಹೋರಾಟಕ್ಕೆ ತನ್ನನ್ನು ಇಡಿಯಾಗಿ ಸಮರ್ಪಿಸಿಕೊಂಡ ಮತ್ತು ಆನಂತರದ ರಾಜಕೀಯ ಏರಿಳಿತಗಳಿಗೂ ಅಷ್ಟೇ ಪ್ರಾಮಾಣಿಕವಾಗಿ ಸಾಕ್ಷಿಯಾದ ಕುಟುಂಬವೊಂದರ ಕುಡಿಯಾಗಿ ತನ್ನ ಬದುಕಿನಲ್ಲಿ ನಡೆದ ಜೀವಂತ ಘಟನೆಗಳನ್ನು, ನೋವು ನಲಿವುಗಳನ್ನು, ಸ್ನಿಗ್ಧ ಸುಂದರ ಶೈಲಿಯಲ್ಲಿ ಅತ್ಯಂತ ಆಕರ್ಷಕವಾಗಿ, ಪರಿಣಾಮಕಾರಿಯಾಗಿ ಇಲ್ಲಿ ನಿರೂಪಿಸಿದ್ದಾರೆ. ತನ್ನ ಭಾವನಿಷ್ಠೆ ಮತ್ತು ಚರಿತ್ರೆನಿಷ್ಠೆಯಿಂದಾಗಿ ಓದುಗರ ಮನದಲ್ಲಿ ಹಸಿರಾಗಿ ನಿಲ್ಲುವ ಹತೀಸಿಂಗ್‌ರ ‘ವಿತ್ ನೋ ರಿಗ್ರೇಟ್ಸ್’ ಆತ್ಮಕತೆಯನ್ನು ಹಿರಿಯ ಸಾಹಿತಿ ದೇ. ಜವರೇಗೌಡರು ಅಷ್ಟೇ ಆಪ್ತತೆಯ ಧಾಟಿಯಲ್ಲಿ ಕನ್ನಡಕ್ಕೆ ಕರೆತಂದಿದ್ದಾರೆ.

 • ಗುರುತು ಸಂಖ್ಯೆ.

  KPP 0042

 • ಲೇಖಕರು

  ದೇ.ಜವರೇಗೌಡ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2000

 • ಐಎಸ್‌ಬಿಎನ್‌

  81-7713-018-8

 • ಬೆಲೆ

  55/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 28/-

 • ಪುಟಗಳು

  226

ನೆಚ್ಚಿನ ಪುಸ್ತಕ ಖರೀದಿಸಿ