ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಅಭಿಜಾತ ಕನ್ನಡ ಸಾಹಿತ್ಯ ಕಲ್ಯಾಣ ಯೋಜನೆ ತಾಂತ್ರಿಕ ಸಲಹಾ ಸಮಿತಿ ಎರಡನೇ ಸಭೆ ಇಂದು ನಡೆಯಿತು - ಹೆಚ್ಚಿನ ಮಾಹಿತಿಗೆ | ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳ ಚೊಚ್ಚಲ ಕೃತಿಗಳ ಆಯ್ಕೆ ಪಟ್ಟಿ - ಹೆಚ್ಚಿನ ಮಾಹಿತಿಗೆ | ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳ ಚೊಚ್ಚಲ ಕೃತಿಗಳ ಆಯ್ಕೆ ಪಟ್ಟಿ - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಪ್ರತಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಮೂಡ್ನಾಕೂಡು ಚಿನ್ನಸ್ವಾಮಿ ಅವರ ಸಮಗ್ರ ಸಾಹಿತ್ಯ ಸಂಪುಟ-3 (ಲೇಖನಗಳು)

ಮೂಡ್ನಾಕೂಡು ಚಿನ್ನಸ್ವಾಮಿ ಅವರ ಸಮಗ್ರ ಸಾಹಿತ್ಯ ಸಂಪುಟ-3 (ಲೇಖನಗಳು)

ಪುಸ್ತಕ ಸೂಚಿ

ಜನಸಮುದಾಯದ ಸಮಸ್ಯೆಗಳನ್ನು ವಿಶ್ಲೇಷಿಸುತ್ತ ಅನೇಕ ವಿಚಾರಗಳ ಬಗ್ಗೆ ಚಿಂತನ ಮಂಥನ ನಡೆಸುವ ಮಾದರಿಯಲ್ಲಿ ಇಲ್ಲಿನ ಲೇಖನಗಳು ಮೂಡಿಬಂದಿವೆ. ಸಾಹಿತ್ಯ, ಸಂಸ್ಕೃತಿ, ಸಮಾಜ ವಿಜ್ಞಾನ, ಆರ್ಥಿಕತೆ ಮುಂತಾದ ವಿಷಯಗಳ ಬಗ್ಗೆ ವಿಮರ್ಶಾತ್ಮಕತೆಯಿಂಧ ಕೂಡಿದ್ದು, ಚಿಂತನೆಗೆ ಹಚ್ಚುತ್ತವೆ. ವಸ್ತುನಿಷ್ಟ ಅಧ್ಯಯನ ಮಾಡಿರುವ ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರು ಕ್ರಿಯಾಶೀಲತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಯಾವುದೇ ವಿಷಯವಾದರೂ ಮೂಲಭೂತ ಪ್ರಶ್ನೆಗಳನ್ನೆತ್ತಿಕೊಂಡು ಉತ್ತರಿಸುತ್ತ ಹೋಗುವುದು ಅವರ ಜಾಯಮಾನ. ಅಸ್ಪೃಶ್ಯತೆಯನ್ನು ಧರ್ಮದ ಸೋಗಿನಲ್ಲಿ ಒಂದು ಸಮುದಾಯಕ್ಕೆ ಇರಿದ ಕೀಳರಿಮೆಯ ಅಲಗು ಎಂದು ಮೂಡ್ನಾಕೂಡು ವ್ಯಾಖ್ಯಾನಿಸುತ್ತಾರೆ. ದಲಿತ ಚಳುವಳಿ - ಹೋರಾಟಗಳು ಪುನಶ್ಚೇತನಗೊಳ್ಳಬೇಕಾದ ಅನಿವಾರ್ಯತೆಯನ್ನು ಮನುಮುಟ್ಟುವಂತೆ ವಿವರಿಸಿದ್ದಾರೆ. ಜನತೆಯನ್ನು ಕಾಡುತ್ತಿರುವ ಬಹುದೊಡ್ಡ ಪಿಡುಗುಗಳಾದ ಅಜ್ಞಾನ ಮತ್ತು ಮೌಢ್ಯ ನಿವಾರಿಸುವ ನಿಟ್ಟಿನಲ್ಲಿ ವೈಜ್ಞಾನಿಕ ದೃಷ್ಟಿಕೋನದ ಅಗತ್ಯವನ್ನು ಸಾರುವಂತಹ ಲೇಖನಗಳು ಇಲ್ಲಿವೆ. ಭಾರತದ ಸಂಕಷ್ಟಗಳ ಮೂಲ ಹಸಿವು ಮತ್ತು ಅವಮಾನ ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆ ಲೇಖಕರಿಗಿದೆ. ಅವರ ಜೀವಪರ ಕಾಳಜಿ, ಮಾನವೀಯತೆಯ ತುಡಿತ ಮಿಡಿತಗಳು ವ್ಯಕ್ತವಾಗಿವೆ. ಬುದ್ಧ - ಬಸವ ಅಂಬೇಡ್ಕರ್ ಚಳವಳಿಯನ್ನು ಸಮಾನತೆಯ ಸೂತ್ರದಲ್ಲಿ ಹೆಣೆದಿರುವ ರೀತಿ ಅಪೂರ್ವವಾದುದು.

 • ಗುರುತು ಸಂಖ್ಯೆ.

  KPP 0414

 • ಲೇಖಕರು

  ಡಾ. ಮೂಡ್ನಾಕೂಡು ಚಿನ್ನಸ್ವಾಮಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2018

 • ಐಎಸ್‌ಬಿಎನ್‌

 • ಬೆಲೆ

  422/-

 • ರಿಯಾಯಿತಿ

  15%

 • ಪಾವತಿಸಬೇಕಾದ ಮೊತ್ತ

  ₹ 359/-

 • ಪುಟಗಳು

  480

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ