ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಅಭಿಜಾತ ಕನ್ನಡ ಸಾಹಿತ್ಯ ಕಲ್ಯಾಣ ಯೋಜನೆ ತಾಂತ್ರಿಕ ಸಲಹಾ ಸಮಿತಿ ಎರಡನೇ ಸಭೆ ಇಂದು ನಡೆಯಿತು - ಹೆಚ್ಚಿನ ಮಾಹಿತಿಗೆ | ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳ ಚೊಚ್ಚಲ ಕೃತಿಗಳ ಆಯ್ಕೆ ಪಟ್ಟಿ - ಹೆಚ್ಚಿನ ಮಾಹಿತಿಗೆ | ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳ ಚೊಚ್ಚಲ ಕೃತಿಗಳ ಆಯ್ಕೆ ಪಟ್ಟಿ - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಪ್ರತಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಟಿ.ಎಸ್. ವೆಂಕಣ್ಣಯ್ಯ ಸಮಗ್ರ ಸಾಹಿತ್ಯ ಸಂಪುಟ

ಟಿ.ಎಸ್. ವೆಂಕಣ್ಣಯ್ಯ ಸಮಗ್ರ ಸಾಹಿತ್ಯ ಸಂಪುಟ

ಪುಸ್ತಕ ಸೂಚಿ

ಬಿಡಿಬಿಡಿಯಾಗಿ ಚೆದುರಿ ಹೋಗಿದ್ದ ವೆಂಕಣ್ಣಯ್ಯನವರ ಬರಹಗಳನ್ನು ಒಂದು ಕಡೆ ಒಟ್ಟಾಗಿ ಸಿಗುವಂತೆ ಮಾಡಿದ ಸಂಪಾದಕರಾದ ಹೆಚ್ ಎಸ್ ವೆಂಕಟೇಶಮೂರ್ತಿಯವರ ಕಾರ್ಯ ಮಹತ್ತರವಾದದ್ದು . ಪುಸ್ತಕವನ್ನು ನಾಲಕ್ಕು ಭಾಗಗಳಾಗಿ ಮಾಡಿ ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಇತರ ಲೇಖನಗಳು , ಪ್ರಾಚೀನ ಸಾಹಿತ್ಯ , ಕರ್ಣಾಟ ಕಾದಂಬರೀ ಸಂಗ್ರಹ ಮತ್ತು ಹರಿಹರ ಕವಿಯ ಬಸವರಾಜದೇವರ ರಗಳೆ ಎನ್ನುವುದಾಗಿದೆ . ಇದರಲ್ಲಿ ಎರಡು ವಿಭಾಗಗಳು ಲೇಖನಗಳಾಗಿದ್ದು ಮತ್ತೆರಡು ಕಾವ್ಯ ಸಂಪಾದನೆಯದಾಗಿದೆ .‌ ಸಂಸ್ಕೃತ ಮತ್ತು ಕನ್ನಡ ಮಹಾಕಾವ್ಯಗಳ ವಿವೇಚನೆಯ ಭಾಗ ಎಲ್ಲಾ ಓದುಗರಿಗೂ ಇಂದಿಗೆ ಅಗತ್ಯವಾದ್ದೇ ಆಗಿದೆ . ಬೌದ್ಧ ಧರ್ಮದ ಸಾಹಿತ್ಯ ಕನ್ನಡ ಸಾಹಿತ್ಯದ ಸಂಬಂಧ ಅದರ ಐತಿಹಾಸಿಕತೆಯ ಬಗೆಗೆ ವೆಂಕಣ್ಣಯ್ಯನವರ ಮಾತುಗಳು ಎಲ್ಲಾ ಕಾಲಕ್ಕೂ ಚಿಂತನಾರ್ಹ . ಕಾಳಿದಾಸನ‌ ಕಾವ್ಯಗಳು ಮತ್ತು ಪಾಶ್ಚಾತ್ಯ ಕಾವ್ಯಗಳ ತೌಲನಿಕ ವಿವೇಚನೆಯ ಲೇಖನ ಕನ್ನಡದಲ್ಲಿ ದೊರೆತಿರುವುದು ಬಹಳ ಮುಖ್ಯವಾದದ್ದು . ಪಂಪ ಭಾರತದ ಮೇಲಿನ ಲೇಖನ ಮೊದಲ ತಲೆಮಾರು ಪಂಪನ ಕಾವ್ಯಗಳನ್ನು ಅರ್ಥೈಸುವ ರೀತಿಯಲ್ಲಿ ಪ್ರೌಢಿಮೆ ಉತ್ಕೃಷ್ಟವಾಗಿದ್ದು ಇಂದಿಗೂ ಮುಖ್ಯವಾದದ್ದಷ್ಟೇ ಅಲ್ಲದೆ ಮೌಲಿಕವಾದ ಬರಹಗಳಾಗಿದೆ . ಸಾಹಿತ್ಯ , ಸಂಸ್ಕೃತಿ , ಭಾಷೆ , ಕಾವ್ಯದ ಬಗೆಗಿನ ಚಿಂತನೆಗಳು ೬೦೦ ಕ್ಕೂ ಹೆಚ್ಚು ಪುಟಗಳಲ್ಲಿ ದೊರೆಯುತ್ತದೆ .‌

 • ಗುರುತು ಸಂಖ್ಯೆ.

  KPP 0413

 • ಲೇಖಕರು

  ಡಾ. ಎಚ್.ಎಸ್. ವೆಂಕಟೇಶ ಮೂರ್ತಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2018

 • ಐಎಸ್‌ಬಿಎನ್‌

 • ಬೆಲೆ

  480/-

 • ರಿಯಾಯಿತಿ

  15%

 • ಪಾವತಿಸಬೇಕಾದ ಮೊತ್ತ

  ₹ 408/-

 • ಪುಟಗಳು

  628

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ