ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಹಿ.ಚಿ. ಶಾಂತವೀರಯ್ಯ ಅವರ ನಿಧನಕ್ಕೆ ಸಂತಾಪ - ಹೆಚ್ಚಿನ ಮಾಹಿತಿಗೆ | ಜಿ ಎಸ್ ಆಮೂರ ನಿಧನಕ್ಕೆ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಸಂತಾಪ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಡಾ. ಸಿದ್ಧಲಿಂಗಯ್ಯ ಸಮಗ್ರ ಸಾಹಿತ್ಯ ಸಂಪುಟ-4 ಗ್ರಾಮದೇವತೆಗಳು - ಅವತಾರಗಳು

ಡಾ. ಸಿದ್ಧಲಿಂಗಯ್ಯ ಸಮಗ್ರ ಸಾಹಿತ್ಯ ಸಂಪುಟ-4 ಗ್ರಾಮದೇವತೆಗಳು - ಅವತಾರಗಳು

ಪುಸ್ತಕ ಸೂಚಿ

ಇಲ್ಲಿ ಬರುವ ಎಲ್ಲ ಗ್ರಾಮದೇವತೆಗಳು ಶ್ರಮಮೂಲದ ಸಮುದಾಯಗಳು ಕಟ್ಟಿಕೊಂಡ ಪರಂಪರೆಯೊಳಗಿನ ಕಾಲ್ಪನಿಕ ದೈವರೂಪಗಳು, ಸಹಜವಾಗಿ ಈ ಎಲ್ಲ ದೈವಗಳು ಮನುಷ್ಯರ ಸಣ್ಣತನ, ತಾರತಮ್ಯ, ದ್ವೇಷ, ಅಸೂಯೆ, ಪ್ರೀತಿ, ಅಸಹನೆ ಇಂತಹ ಗುಣವಿಶೇಷಗಳ ಸಾರರೂಪಗಳೇ ಆಗಿವೆ. ಒಂದು ಗ್ರಾಮಕ್ಕೆ ಒಬ್ಬ ದೇವತೆಯಲ್ಲ. ಗ್ರಾಮದೊಳಕ್ಕೆ ಕುಲಗಳೆಷ್ಟಿರುತ್ತವೆಯೋ ಅಷ್ಟು ಕುಲದೈವಗಳು ಗ್ರಾಮದ ತುಂಬ ಇರುತ್ತವೆ. ಜಾತಿಮೂಲದ ನಂಬಿಕೆಗಳಿಗೆ ಅನುಗುಣವಾಗಿ ಆ ದೈವಗಳ ವೇಷಭೂಷಣ, ಆಚಾರ - ವಿಚಾರ ಇತ್ಯಾದಿ ವಿಶೇಷತೆಗಳನ್ನು ಒಳಗೊಂಡಿರುತ್ತವೆ. ಸಿದ್ಧಲಿಂಗಯ್ಯನವರು ಈ ಎಲ್ಲ ದೇವತೆಗಳನ್ನು ಕ್ಷೇತ್ರಾಧ್ಯಯನಕ್ಕೆ ಒಳಪಡಿಸಿದಾಗ ಅದೊಂದು ವಿಚಿತ್ರಲೋಕವಾಗಿ, ವಿಸ್ಮಯ ಹುಟ್ಟಿಸುವ ವಿಶೇಷ ಪ್ರಪಂಚವಾಗಿ ಅವರಿಗೆ ಗೋಚರಿಸಿದೆ. ಹೀಗಾಗಿ ನಂಬಿಕೆ, ವೈಚಾರಿಕತೆ, ವೈಜ್ಞಾನಿಕ ಮನೋಧರ್ಮ, ತಾರ್ಕಿಕ ನ್ಯಾಯದೃಷ್ಟಿ ಇವೆಲ್ಲವುಗಳನ್ನು ಎಚ್ಚರದ ಪ್ರಜ್ಞೆಯಲ್ಲಿ ಈ ಸಂಸ್ಕೃತಿ ವಿಶ್ಲೇಷಣೆಗೆ ಬಳಸಿಕೊಂಡಿದ್ದಾರೆ. ಅವರ ಲಘು ಹಾಸ್ಯ ಮನೋಧರ್ಮ ಇಲ್ಲಿಯ ವಿಶ್ಲೇಷಣೆಗೆ ಹೊಸಬಗೆಯ ಓದಿನ ಆಯಾಮವನ್ನು ಕೊಟ್ಟಿದೆ.

 • ಗುರುತು ಸಂಖ್ಯೆ.

  KPP 0393

 • ಲೇಖಕರು

  ಡಾ. ಸಿದ್ಧಲಿಂಗಯ್ಯ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2018

 • ಐಎಸ್‌ಬಿಎನ್‌

 • ಬೆಲೆ

  470/-

 • ರಿಯಾಯಿತಿ

  15%

 • ಪಾವತಿಸಬೇಕಾದ ಮೊತ್ತ

  ₹ 400/-

 • ಪುಟಗಳು

  546

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ