ನಮ್ಮ ಪುಸ್ತಕಗಳು

ಬಿಜಿಎಲ್ ಸ್ವಾಮಿ ಸಾಹಿತ್ಯ ವಾಚಿಕೆ ರಸ ರುಚಿ
ಪುಸ್ತಕ ಸೂಚಿ
ಬಿಜಿಎಲ್ ಸ್ವಾಮಿಯವರು ಸಸ್ಯಶಾಸ್ತ್ರಜ್ಞರಾದರೂ ಪುರಾಣ, ಚರಿತ್ರೆ, ಕನ್ನಡ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ, ಮಾನವಶಾಸ್ತ್ರ, ಮನಃಶಾಸ್ತ್ರ, ಹೀಗೆ ಬಹುಮುಖ ಜ್ಞಾನಶಿಸ್ತುಗಳನ್ನು ಅಧ್ಯಯನದ ಮೂಲಕ ಅರಗಿಸಿಕೊಂಡಿದ್ದರು. ವಿಶೇಷವೆಂದರೆ ತಮ್ಮ ವೃತ್ತಿಜೀವನದಲ್ಲಿ ಈ ಎಲ್ಲ ಅಧ್ಯಯನದ ವಿಚಾರಸಾರವನ್ನು ಬಳಸಿಕೊಂಡಿದ್ದು ಅವರ ಕಾಲೋಚಿತ ಪ್ರಜ್ಞೆಯ ಪ್ರತೀಕವೇ ಸರಿ. ಪುರಾಣದ ಪರಿಭಾಷೆ, ಸಾಹಿತ್ಯಕ ಪರಿಭಾಷೆ ಹಾಗೂ ಸಸ್ಯಶಾಸ್ತ್ರೀಯ ಪರಿಭಾಷೆ ಈ ಮೂರನ್ನೂ ಉಲ್ಲೇಖಿಸುತ್ತ ಸ್ಥಳೀಯ ಜ್ಞಾನದ ಬೇರಿನಲ್ಲಿ ಜಾಗತಿಕ ಜ್ಞಾನದ ಶಾಖೆಗಳನ್ನು ವಿವರಿಸುವ ಪರಿ ಅದ್ಭುತ. ಇದು ಕೇವಲ ವಿಜ್ಞಾನ ವಿಷಯವಾಗಿ ಮಾತ್ರ ಉಳಿಯದೇ ಒಂದು ಸಸ್ಯಪ್ರಭೇದದ ಸಂಗತಿಯು ಸಂಸ್ಕೃತಿಯ ಭಾಗವಾಗಿ ಜನಾಂಗಗಳ ನಡುವೆ ಹೇಗೆ ವಿಸ್ತರಿಸಿಕೊಂಡಿದೆ ಮತ್ತು ನಂಬಿಕೆ ನಡಾವಳಿಗಳಾಗಿ ಸ್ವೀಕೃತವಾಗಿದೆ ಎಂಬಂತಹ ಎಲ್ಲ ವಿಚಾರಗಳನ್ನೂ ವಿವರಿಸುತ್ತಾರೆ.
-
ಗುರುತು ಸಂಖ್ಯೆ.
KPP 0412
-
ಲೇಖಕರು
ಡಾ. ಟಿ.ಆರ್. ಅನಂತರಾಮು
-
ಭಾಷೆ
ಕನ್ನಡ
-
ಪ್ರಕಟಿತ ವರ್ಷ
2018
-
ಐಎಸ್ಬಿಎನ್
-
ಬೆಲೆ
₹
170/- -
ರಿಯಾಯಿತಿ
15%
-
ಪಾವತಿಸಬೇಕಾದ ಮೊತ್ತ
₹ 145/-
-
ಪುಟಗಳು
228