ನಮ್ಮ ಪುಸ್ತಕಗಳು

ಗಂಟಿಚೋರ್
ಪುಸ್ತಕ ಸೂಚಿ
1871ರಲ್ಲಿ ಬ್ರಿಟಿಷ್ ಸರ್ಕಾರ ಜಾರಿಗೆ ತಂದ ಅಪರಾಧಿ ಬುಡಕಟ್ಟು ಕಾಯ್ದೆಯಿಂದಾಗಿ ಬಹಳಷ್ಟು ಅಲೆಮಾರಿ ಸಮುದಾಯಗಳು ಕಳಂಕಕ್ಕೆ ತುತ್ತಾಗಿ, ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾದದ್ದು ಇತಿಹಾಸದ ವಿಪರ್ಯಾಸ. ಅಂತಹ ವಿಪರ್ಯಾಸಕ್ಕೆ ತುತ್ತಾದ ಸಮುದಾಯಗಳಲ್ಲಿ ಗಂಟಿಚೋರ್ ಸಮುದಾಯವೂ ಒಂದು. 1952ರಲ್ಲಿ ಕಳಂಕಿತ ಕಾಯ್ದೆ ರದ್ದಾಯಿತಾದರು ಅದು ಉಳಿಸಿಹೋದ ಪಾರಂಪರಿಕ ಅಪರಾಧಿ ಕಳಂಕ ಮಾತ್ರ ಈ ಗಂಟಿಚೋರ್ ಸಮುದಾಯವನ್ನು ಇದುವರೆಗೆ ಬಾಧಿಸುತ್ತಲೇ ಬಂದಿದೆ. ಅದು ಇಂದಿಗೂ ಅವಮಾನದಿಂದಲೇ ಅತಂತ್ರ ಬದುಕು ನಡೆಸುತ್ತಿದೆ. ಇಂಥಾ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಹೀನ ಸ್ಥಿತಿಯನ್ನು ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆಯವರ ಈ ಕೃತಿ ಅಂಕಿ-ಅಂಶಗಳ ಅಧಿಕೃತ ಮಾಹಿತಿಗಳ ಸಮೇತ ಓದುಗರ ಮುಂದೆ ಬಿಚ್ಚಿಡುತ್ತದೆ.
-
ಗುರುತು ಸಂಖ್ಯೆ.
KPP 0348
-
ಲೇಖಕರು
ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ
-
ಭಾಷೆ
ಕನ್ನಡ
-
ಪ್ರಕಟಿತ ವರ್ಷ
2017
-
ಐಎಸ್ಬಿಎನ್
978-93-5289-000-2
-
ಬೆಲೆ
₹
120/- -
ರಿಯಾಯಿತಿ
15%
-
ಪಾವತಿಸಬೇಕಾದ ಮೊತ್ತ
₹ 102/-
-
ಪುಟಗಳು
240