ಸುದ್ದಿ ಸಮಾಚಾರ:
ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಪುಸ್ತಕ ದಿನಾಚರಣೆ ಕಾರ್ಯಕ್ರಮದ ಫೋಟೋ ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿಗಳು - ಹೆಚ್ಚಿನ ಮಾಹಿತಿಗೆ | ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳನ್ನು ಚಂದನ ವಾಹಿನಿಯಲ್ಲಿ ಬರುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ , ವಿಜೇತರಿಗೆ ನೀಡಲಾಗುತ್ತಿದೆ. - ಹೆಚ್ಚಿನ ಮಾಹಿತಿಗೆ |  ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. - ಹೆಚ್ಚಿನ ಮಾಹಿತಿಗೆ |   ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳು - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ವೈದ್ಯ ಪದಗಳ ಅರ್ಥ ವಿವರಣಕೋಶ

ವೈದ್ಯ ಪದಗಳ ಅರ್ಥ ವಿವರಣಕೋಶ

ಪುಸ್ತಕ ಸೂಚಿ

ಜನಸಾಮಾನ್ಯರಿಗೆ ವೈದ್ಯಕೀಯ ವಿಷಯವನ್ನು ಆತ್ಮೀಯಗೊಳಿಸುವ ಪ್ರಯತ್ನಕ್ಕೆ ಮೊದಲು ಅಡ್ಡಿಯಾಗುವುದೇ ವೈದ್ಯಕೀಯ ಪಾರಿಭಾಷಿಕ ಪದಗಳು. ಎಲ್ಲಾ ಕ್ಷೇತ್ರಗಳಂತೆ ಸುಲಭ ಸಂವಹನ ಸಾಧ್ಯಗೊಳಿಸುವ ಸಲುವಾಗಿ ವೈದ್ಯಕೀಯ ಸಿಬ್ಬಂದಿಗಳ ನಡುವೆ ಅಂಗೀಕೃತ ಪದಗಳು ಮತ್ತು ಸಂಕೇತಗಳ ಬಳಕೆ ರೂಢಿಯಲ್ಲಿದೆ. ಆದರೆ ಈ ಬಳಕೆಗಳು ಜನಸಾಮಾನ್ಯರ ಗ್ರಹಿಕೆಗೆ ನಿಲುಕದಂತವು. ವೈದ್ಯರು ಉಚ್ಛರಿಸುವ, ತನಗರ್ಥವಾಗದ ಒಂದೊಂದು ಪದವೂ ರೋಗಿಯಲ್ಲಿ ಭಯ ಮತ್ತು ಗೊಂದಲವನ್ನು ಮೂಡಿಸುವ ಸಂಭವವಿರುತ್ತದೆ. ವೈದ್ಯರಿಗೂ ಅವುಗಳನ್ನು ವಿವರಿಸಿ ಹೇಳುವ ಸಮಯಾವಕಾಶ ಇಲ್ಲದೇ ಹೋಗಬಹುದು. ಇಂಥಾ ಸಂದರ್ಭಗಳಲ್ಲಿ ಪದಗಳ ವಿವರಣೆ, ಗಂಭೀರತೆ ಅರ್ಥವಾಗದೆ ಜನಸಾಮಾನ್ಯರು ವೈದ್ಯಕೀಯ ಕ್ಷೇತ್ರವನ್ನು ತಮ್ಮ ಅರಿವಿನ ವ್ಯಾಪ್ತಿಯಿಂದ ದೂರವಿಟ್ಟುಬಿಡುತ್ತಾರೆ. ವೈದ್ಯ ಮತ್ತು ರೋಗಿ ನಡುವೆ ಬಾಂಧವ್ಯ ವೃದ್ಧಿಸುವಲ್ಲಿ ಇದೂ ಒಂದು ತಡೆಯಾಗಬಹುದು. ಅದನ್ನು ನಿವಾರಿಸುವ ನಿಟ್ಟಿನಲ್ಲಿ ಲೇಖಕ ಜೋಡಿಯಾದ ಎನ್.ವಿಶ್ವರೂಪಾಚಾರ್ ಮತ್ತು ಗಿರೀಶ್ ತಾಳಿಕಟ್ಟೆ ಈ ಕೃತಿಯಲ್ಲಿ ವೈದ್ಯಕೀಯ ಕ್ಷೇತ್ರದ ಪಾರಿಭಾಷಿಕ ಪದಗಳ ಅರ್ಥ ಮತ್ತು ಅವುಗಳ ಸಮಂಜಸ, ಸರಳ ವಿವರಣೆಯನ್ನು ಇಲ್ಲಿ ನೀಡಿದ್ದಾರೆ.

 • ಗುರುತು ಸಂಖ್ಯೆ.

  KPP 0314

 • ಲೇಖಕರು

  ಶ್ರೀ ಎನ್.ವಿಸ್ವರೂಪಾಚಾರ್

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-034-7

 • ಬೆಲೆ

  70/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 49/-

 • ಪುಟಗಳು

  132

ನೆಚ್ಚಿನ ಪುಸ್ತಕ ಖರೀದಿಸಿ