ಪ್ರೊ. ಜಯದೇವ್ ಅವರು ಕನ್ನಡ ಸಾಹಿತ್ಯದ ಅಧ್ಯಯನ ಮತ್ತು ಸಂಶೋಧನೆಯನ್ನು ಗಂಭೀರವಾಗಿ ಸ್ವೀಕರಿಸಿದ್ದವರು. ಇವರ ಬರವಣಿಗೆ ಬಾಹುಳ್ಯದಲ್ಲಿ ಕಡಿಮೆಯಾದರೂ, ಅವರು ಬರೆದಿರುವ ಕೆಲವು ಲೇಖನಗಳು ಮತ್ತು ಕೃತಿಗಳು ಅವರ ವಿದ್ವತ್ ಮತ್ತು ವಿಚಾರಶಕ್ತಿಗೆ ಸಾಕ್ಷಿಯಾಗಿವೆ. ಅವರ ಹಲವು ಲೇಖನಗಳ ಕಟ್ಟನ್ನು ಇಲ್ಲಿ ಕೃತಿಯಾಗಿಸಲಾಗಿದೆ. ಇಲ್ಲಿನ ಲೇಖನಗಳು ವಸ್ತುವೈವಿಧ್ಯದಿಂದ ಕೂಡಿರುವುದು ಮಾತ್ರವಲ್ಲದೆ, ಲೇಖಕರು ವಿವಿಧ ಸಾಹಿತ್ಯ ಪ್ರಕಾರಗಳ ಬಗ್ಗೆ ಇರಿಸಿಕೊಂಡಿರುವ ಸಮಾನ ಒಲವನ್ನು ದ್ಯೋತಿಸುತ್ತವೆ. ವಿಷಯ ಪ್ರವೇಶ, ಸೂಕ್ಷ್ಮ ಒಳನೋಟ, ವಿಶಿಷ್ಟ ವಿಶ್ಲೇಷಣಾ ಶಕ್ತಿಯನ್ನು ಮುಕ್ಕಳಿಸುವ ನಿರೂಪಣೆ, ಸರಳವೂ ಪಾರದರ್ಶಕವೂ ಆದ ಭಾಷೆ - ಇವುಗಳಿಂದ ಈ ಲೇಖನಗಳು ಓದುಗರ ಗಮನ ಸೆಳೆಯುತ್ತವೆ.
ಗುರುತು ಸಂಖ್ಯೆ | KPP 0031 |
ಲೇಖಕರು | ಪ್ರೊ. ಹು. ಕಾ. ಜಯದೇವ್ |
ಭಾಷೆ | Kannada |
ಪ್ರಕಟಿತ ವರ್ಷ | 1999 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 50/- |
ಪುಟಗಳು | 201 |