ಸುದ್ದಿ ಸಮಾಚಾರ:
ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಪುಸ್ತಕ ದಿನಾಚರಣೆ ಕಾರ್ಯಕ್ರಮದ ಫೋಟೋ ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿಗಳು - ಹೆಚ್ಚಿನ ಮಾಹಿತಿಗೆ | ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳನ್ನು ಚಂದನ ವಾಹಿನಿಯಲ್ಲಿ ಬರುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ , ವಿಜೇತರಿಗೆ ನೀಡಲಾಗುತ್ತಿದೆ. - ಹೆಚ್ಚಿನ ಮಾಹಿತಿಗೆ |  ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. - ಹೆಚ್ಚಿನ ಮಾಹಿತಿಗೆ |   ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳು - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ನಗು-ಅತ್ಯುತ್ತಮ ಔಷಧಿ

ನಗು-ಅತ್ಯುತ್ತಮ ಔಷಧಿ

ಪುಸ್ತಕ ಸೂಚಿ

ರೋಗಿಗಳ ಸುತ್ತಲೇ ತನ್ನ ಅಸ್ತಿತ್ವ ಕಂಡುಕೊಳ್ಳುವ ವೈದ್ಯಕೀಯ ಕ್ಷೇತ್ರ ವಾಸ್ತವದಲ್ಲಿ ಸಾಕಷ್ಟು ಹಾಸ್ಯಪ್ರಜ್ಞೆಗೂ ಅವಕಾಶವನ್ನು ತನ್ನೊಳಗೆ ಕಲ್ಪಿಸಿಕೊಂಡ ಕ್ಷೇತ್ರ. ರೋಗಿ ಮತ್ತು ವೈದ್ಯರ ನಡುವೆ ನಡೆಯುವ ಹಲವು ಸಂಭಾಷಣೆಗಳು, ಸನ್ನಿವೇಶಗಳು ನಗು ಉಕ್ಕಿಸುವಂತಿರುತ್ತವೆ. ರೋಗದ ವೈಜ್ಞಾನಿಕ ಆಯಾಮದ ಕುರಿತು ರೋಗಿ ಹಾಗೂ ರೋಗಿಯ ಸಂಬಂಧಿಕರಿಗೆ ಇರುವ ಮುಗ್ಧ ಅಜ್ಞಾನ, ಅದೇರೀತಿ ಕೆಲವೊಮ್ಮೆ ವೈದ್ಯರಾದವರಿಗೆ ರೋಗಿಯ ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಇರುವ ಅಪಕಲ್ಪನೆಗಳು ಇಂತಹ ಹಾಸ್ಯಕ್ಕೆ ಮೂಲ ಪರಿಕಲ್ಪನೆಗಳಾಗಿರುತ್ತವೆ. ತಮ್ಮ ವೃತ್ತಿ ಜೀವನದಲ್ಲಿ ನಡೆದ ಇಂತಹ ಹಾಸ್ಯ ಸನ್ನಿವೇಶಗಳನ್ನು ಅಷ್ಟೇ ನವಿರು ಹಾಸ್ಯ ಧಾಟಿಯಲ್ಲಿ ಲೇಖಕ ಡಾ|| ಕೆ.ಪಿ. ಪುತ್ತೂರಾಯರು ಇಲ್ಲಿ ದಾಖಲಿಸುತ್ತಾ ಸಾಗಿದ್ದಾರೆ. ಕೊನೆಗೆ ನಗುವು ಒಂದು ಉತ್ತಮ ಆರೋಗ್ಯ ಸಲಕರಣೆ ಎನ್ನುವುದನ್ನೂ ಅವರು ಓದುಗರಿಗೆ ಮನವರಿಕೆ ಮಾಡಿಕೊಡುತ್ತಾರೆ.

 • ಗುರುತು ಸಂಖ್ಯೆ.

  KPP 0303

 • ಲೇಖಕರು

  ಡಾ.ಕೆ.ಪಿ.ಪುತ್ತೂರಾಯ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-045-3

 • ಬೆಲೆ

  50/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 35/-

 • ಪುಟಗಳು

  80

ನೆಚ್ಚಿನ ಪುಸ್ತಕ ಖರೀದಿಸಿ