ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
2019ನೇ ಸಾಲಿನಲ್ಲಿ ಆಯ್ಕೆಯಾದ ಯುವಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಪ್ರಾಧಿಕಾರದ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ - ಬಹುಮಾನ ಪ್ರಕಟ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಮುದ್ದಣ ವಿರಚಿತ ರಾಮಾಶ್ವಮೇಧಂ

ಮುದ್ದಣ ವಿರಚಿತ ರಾಮಾಶ್ವಮೇಧಂ

ಪುಸ್ತಕ ಸೂಚಿ

ಮುದ್ದಣ ವಿರಚಿಸಿ, ಕಾವ್ಯಮಂಜರಿಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು, ತದನಂತರ ಕಾವ್ಯ ಕಲಾನಿಧಿಯ ಮಾಲೆಯ ಪುಸ್ತಕವಾಗಿ ಪ್ರಕಟಗೊಂಡ ರಾಮಾಶ್ವಮೇಧಂ ಗದ್ಯಕೃತಿಯನ್ನು ಅದರ ಮೂಲ ಹಳೆಗನ್ನಡ ಮಾತೃಕೆಯಲ್ಲೇ ಸಂಪಾದಿಸಿರುವ ಕೃತಿ ಇದು. ಮುದ್ದಣ ಕವಿಕೃತ ಶ್ರೀ ರಾಮಾಶ್ವಮೇಧಂ ಕೃತಿಯನ್ನು ಹಲವು ಬಾರಿ ಹಲವರು ಸಂಪಾದಿಸಿದ್ದುಂಟು. ಅದರಲ್ಲಿ ಮುದ್ದಣನ ಮೂಲ ಹಸ್ತಪ್ರತಿಯನ್ನೇ ಕಣ್ಣಾರೆ ಕಂಡು ಸಂಪಾದಿಸಿದ ಪ್ರೊ.ಜಿ. ವೆಂಕಟಸುಬ್ಬಯ್ಯನವರು ಶಬ್ಧರೂಪ ಕಾಗುಣಿತವನ್ನು ಹಸ್ತಪ್ರತಿಯಲ್ಲಿದ್ದಂತೆಯೇ ಉಳಿಸಿಕೊಳ್ಳುವ ಸರ್ವ ಪ್ರಯತ್ನ ಮಾಡಿದ್ದರು. ಪ್ರಸ್ತುತ ಗಾಯತ್ರೀ ನಾವಡೆಯವರು ಪ್ರೊ. ಜಿ.ವೆಂ.ರ ಸಂಪಾದನೆಯನ್ನು ಆಧರಿಸಿ ಈ ಕೃತಿಯನ್ನು ನಿರೂಪಿಸಿದ್ದಾರೆ.

 • ಗುರುತು ಸಂಖ್ಯೆ.

  KPP 0293

 • ಲೇಖಕರು

  ಡಾ. ಗಾಯತ್ರಿ ನಾವಡ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-055-2

 • ಬೆಲೆ

  160/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 112/-

 • ಪುಟಗಳು

  230

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ