ಸುದ್ದಿ ಸಮಾಚಾರ:
ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಪುಸ್ತಕ ದಿನಾಚರಣೆ ಕಾರ್ಯಕ್ರಮದ ಫೋಟೋ ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿಗಳು - ಹೆಚ್ಚಿನ ಮಾಹಿತಿಗೆ | ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳನ್ನು ಚಂದನ ವಾಹಿನಿಯಲ್ಲಿ ಬರುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ , ವಿಜೇತರಿಗೆ ನೀಡಲಾಗುತ್ತಿದೆ. - ಹೆಚ್ಚಿನ ಮಾಹಿತಿಗೆ |  ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. - ಹೆಚ್ಚಿನ ಮಾಹಿತಿಗೆ |   ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳು - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ನಿಜಗುಣ ಶಿವಯೋಗಿ ವಿರಚಿತ ವಿವೇಕ ಚಿಂತಾಮಣಿ

ನಿಜಗುಣ ಶಿವಯೋಗಿ ವಿರಚಿತ ವಿವೇಕ ಚಿಂತಾಮಣಿ

ಪುಸ್ತಕ ಸೂಚಿ

ಕೊಳ್ಳೆಗಾಲ ತಾಲ್ಲೂಕಿನ ಚಿಲಕವಾಡಿ ಬಳಿಯ ಶಂಭುಲಿಂಗನ ಬೆಟ್ಟದಲ್ಲಿ ಗುಹವಾಸಿಗಳಾಗಿ ತಪೋಗೈದು ವೇದ, ಆಗಮ, ಪುರಾಣಾದಿ ಅನೇಕ ಶಾಸ್ತ್ರಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದ ನಿಜಗುಣ ಶಿವಯೋಗಿಗಳ ಷಟ್‌ಶಾಸ್ತ್ರದ ಅತಿ ಪ್ರಮುಖ ಕೃತಿಗಳಲ್ಲಿ ಒಂದು ಈ ವಿವೇಕ ಚಿಂತಾಮಣಿ. ಕನ್ನಡ ಸಾಹಿತ್ಯದಲ್ಲಿ ಮೇರುಕೃತಿಯಾದ ಇದು ಅದ್ಭುತ ವಿಶ್ವಕೋಶವಾಗಿದೆ; ಕನ್ನಡದಲ್ಲಿ ಸ್ವತಂತ್ರವಾಗಿ ಗದ್ಯಶೈಲಿ ಬೆಳೆಯಲು ಈ ಗ್ರಂಥ ಬಹುಮಟ್ಟಿಗೆ ಸಹಾಯ ಮಾಡಿದೆ. ಹತ್ತು ಪರಿಚ್ಛೇಧಗಳನ್ನು ಒಳಗೊಂಡಿರುವ ಈ ಕೃತಿಯಲ್ಲಿ ವೇದಾದಿ ಸಕಲ ಶಾಸ್ತ್ರಾರ್ಥ, ವೇದ ಉಪನಿಷತ್ ವರ್ಣಾಶ್ರಮ, ಪಂಚಾವಸ್ಥೆ, ಶೈವ ಸಿದ್ಧಾಂತ. ಶುದ್ಧಾಧ್ವೈತ, ರಾಜನ ಆಸ್ಥಾನ-ರಾಜಸಭೆ-ಸಂಗೀತ-ನೃತ್ಯ ಇತ್ಯಾದಿ ಲೌಕಿಕ ವಿಷಯಗಳು, ಸಪ್ತದ್ವೀಪಗಳು, ಭೂಲೋಕದ ಯೋಜನಾ ಸಂಖ್ಯೆ, ಪಂಚಭೂತ, ಕಾಲಸ್ವರೂಪದ ಭೇದಗಳು ಇತ್ಯಾದಿ ಅಂಶಗಳನ್ನು ವಿವರಿಸಲಾಗಿದೆ. ಮೂಲಕೃತಿಯಷ್ಟೇ ಪ್ರಖರವಾಗಿ ವಿಶ್ಲೇಷಣೆ, ವಿವರಣೆ ಸಹಿತ ಜಿ.ಎ. ಶಿವಲಿಂಗಯ್ಯನವರು ಈ ಕೃತಿಯನ್ನು ಸಂಪಾದಿಸಿದ್ದಾರೆ.

 • ಗುರುತು ಸಂಖ್ಯೆ.

  KPP 0292

 • ಲೇಖಕರು

  ಡಾ. ಶಿವಲಿಂಗಯ್ಯ ಜಿ.ಎ.

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-056-9

 • ಬೆಲೆ

  200/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 140/-

 • ಪುಟಗಳು

  282

ನೆಚ್ಚಿನ ಪುಸ್ತಕ ಖರೀದಿಸಿ