ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಗೀತಾ ನಾಗಭೂಷಣ ಅವರ ನಿಧನಕ್ಕೆ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಸಂತಾಪ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ನಾರಾಯಣಶರ್ಮ ವಿರಚಿತ ಮುದ್ರಾಮಂಜೂಷವು

ನಾರಾಯಣಶರ್ಮ ವಿರಚಿತ ಮುದ್ರಾಮಂಜೂಷವು

ಪುಸ್ತಕ ಸೂಚಿ

ಹೊಸಗನ್ನಡ ಗದ್ಯ ಸಾಹಿತ್ಯದ ಅರುಣೋದಯ ಕಾಲದಲ್ಲಿ ಸ್ವಯಂಭುವಿನಂತೆ ಆವಿರ್ಭವಿಸಿದ ಅನನ್ಯ, ಅನರ್ಘ್ಯ ಕೃತಿ ಕೆಂಪುನಾರಾಯಣನ ಮುದ್ರಾಮಂಜೂಷ. 1893ರಲ್ಲಿ ರಚಿತವಾದರೂ ಐವತ್ತು ವರ್ಷಗಳ ತರುವಾಯ ಬಾಸೆಲ್ ಮಿಷನರಿ ಸಂಸ್ಥೆಯಿಂದ ಪ್ರಕಟಣೆಗೊಂಡ ಈ ಕೃತಿ ನಂತರದಲ್ಲೂ ಗದ್ಯದ ಭಾಷೆ ಶೈಲಿಗಳಲ್ಲಿ ಉಂಟಾಗುತ್ತಿದ್ದ ಸ್ಥಿತ್ಯಂತರಗಳ ಕಾರಣಕ್ಕೆ ತಿದ್ದುಪಡಿ ಕಾಣುತ್ತಲೇ ಬಂದಿದೆ. ಈ ತಿದ್ದುಪಡಿಗಳಿಂದಾಗಿ ಅದು ಕವಿಲಿಖಿತ ಮೂಲ ರೂಪದಿಂದ ದೂರ ಸರಿಯುತ್ತಲೇ ಬಂದುದು ದುರ್ದೈವ. ಆದರೆ ಈ ಕೃತಿಯಲ್ಲಿ ವೆಂಕಟಾಚಲಶಾಸ್ತ್ರಿಯವರು ಲಭ್ಯವಿದ್ದ ಮೂಲ ತಾಳೆಯೋಲೆ ಪ್ರತಿ, ಕಾಗದ ಪ್ರತಿ ಮತ್ತು ಮುದ್ರಿತ ಪರಿಷ್ಕರಣಗಳನ್ನು ಆಧಾರವಾಗಿಟ್ಟುಕೊಂಡು ಮೂಲಕೃತಿಗೆ ಹೆಚ್ಚೇನು ವ್ಯತ್ಯಾಸ ಬರದಂತೆ ಸಂಪಾದಿಸಿದ್ದಾರೆ.

 • ಗುರುತು ಸಂಖ್ಯೆ.

  KPP 0291

 • ಲೇಖಕರು

  ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2012

 • ಐಎಸ್‌ಬಿಎನ್‌

  978-93-5289-057-6

 • ಬೆಲೆ

  280/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 196/-

 • ಪುಟಗಳು

  461

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ