ಸುದ್ದಿ ಸಮಾಚಾರ:
ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಪುಸ್ತಕ ದಿನಾಚರಣೆ ಕಾರ್ಯಕ್ರಮದ ಫೋಟೋ ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿಗಳು - ಹೆಚ್ಚಿನ ಮಾಹಿತಿಗೆ | ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳನ್ನು ಚಂದನ ವಾಹಿನಿಯಲ್ಲಿ ಬರುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ , ವಿಜೇತರಿಗೆ ನೀಡಲಾಗುತ್ತಿದೆ. - ಹೆಚ್ಚಿನ ಮಾಹಿತಿಗೆ |  ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. - ಹೆಚ್ಚಿನ ಮಾಹಿತಿಗೆ |   ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳು - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಘಿಸಾಡಿ

ಘಿಸಾಡಿ

ಪುಸ್ತಕ ಸೂಚಿ

ಕಬ್ಬಿಣ ಮತ್ತು ಇತರೆ ಲೋಹಗಳ ಕೆಲಸ ಮಾಡುವ ಘಿಸಾಡಿ ಸಮುದಾಯವನ್ನು ಘಿಸಾಡಿ ಕಮ್ಮಾರರು, ಬೈಲು ಕಮ್ಮಾರರು, ರಜಪೂತ್ ಕಮ್ಮಾರ್, ಅಲೆಮಾರಿ ಕಮ್ಮಾರರು ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ. ಎತ್ತಿನ ಬಂಡಿ, ಕುದುರೆಯ ಟಾಂಗ, ಕತ್ತೆಗಳ ಮೇಲೆ ತಮ್ಮ ಸರಕುಗಳನ್ನು ಹೇರಿಕೊಂಡು ಕೆಲಸ ಹುಡುಕಿ ಊರೂರು ತಿರುಗಾಡುವುದರಿಂದ ಗೌಡಾಲಿಯಾ ಲೋಹಾರ ಎಂಬ ಹೆಸರಿನಿಂದಲೂ ಇವರನ್ನು ಕರೆಯಲಾಗುತ್ತದೆ. ಮೂಲತಃ ರಾಜಸ್ಥಾನದ ಮೇವಾಡ ಪ್ರಾಂತ್ಯದ ಈ ಸಮುದಾಯದ ಚರಿತ್ರೆ, ಸಾಹಿತ್ಯ ಮತ್ತು ಭಾಷೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಡಾ. ಬಸವರಾಜ ಎಸ್. ಹಿರೇಮಠ ಮತ್ತು ಅಂಜಲಿ ಸಾಳುಂಕಿಯವರುಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ಓದುಗರ ಮುಂದಿಟ್ಟಿದ್ದಾರೆ.

 • ಗುರುತು ಸಂಖ್ಯೆ.

  KPP 0149

 • ಲೇಖಕರು

  ಡಾ. ಬಸವರಾಜ ಎಸ್.ಹಿರೇಮಠ / ಅಂಜಲಿ ಸಾಳುಂಕಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2008

 • ಐಎಸ್‌ಬಿಎನ್‌

  81-7713-228-8

 • ಬೆಲೆ

  75/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 53/-

 • ಪುಟಗಳು

  210

ನೆಚ್ಚಿನ ಪುಸ್ತಕ ಖರೀದಿಸಿ