ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಹಿ.ಚಿ. ಶಾಂತವೀರಯ್ಯ ಅವರ ನಿಧನಕ್ಕೆ ಸಂತಾಪ - ಹೆಚ್ಚಿನ ಮಾಹಿತಿಗೆ | ಜಿ ಎಸ್ ಆಮೂರ ನಿಧನಕ್ಕೆ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಸಂತಾಪ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಬೈಲಪತ್ತಾರ

ಬೈಲಪತ್ತಾರ

ಪುಸ್ತಕ ಸೂಚಿ

ಕರ್ನಾಟಕದ ವಿಶಿಷ್ಟ ಅಲೆಮಾರಿ ಸಮುದಾಯಗಳಲ್ಲಿ ಒಂದಾದ ಬೈಲಪತ್ತಾರ ಸಮುದಾಯವು ತನ್ನದೇ ಆದಂತಹ ಸಾಂಸ್ಕೃತಿಕ ಚಹರೆಯನ್ನು ಹೊಂದಿದೆ. ತಾಮ್ರ, ಬೆಳ್ಳಿ, ಕಲ್ಲುಬೆಳ್ಳಿ, ಹಿತ್ತಾಳೆಗಳಿಂದ ಆಭರಣಗಳನ್ನು ತಯಾರಿಸಿ ಜಾತ್ರೆ, ಸಂತೆ, ರೈಲ್ವೆ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟ ಮಾಡಿ ಬದುಕುವುದೇ ಈ ಸಮುದಾಯದ ಮೂಲಕಸುಬು. ಈ ಕುಶಲಕರ್ಮಿ ಸಮುದಾಯವು ಆಯಾ ಪ್ರದೇಶದ ಪರಿಸರಕ್ಕೆ ತಕ್ಕಂತೆ ಬೈಲು ಪತ್ತಾರ, ಬೈಲು ಅಕ್ಕಸಾಲಿಗರು, ಗಾಡಿ ಸೋನಾರ, ಪರದೇಶಿ ಪೋದಾರ್ ಎಂಬಿತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುತ್ತದೆ. ಈ ಸಮುದಾಯದ ಚರಿತ್ರೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಅದೇ ಸಮುದಾಯದ ಸೆರಗಿನಿಂದ ಬಂದ ವಿಶ್ವನಾಥ ಎಂ. ಬೈಲುಪತ್ತಾರ ಮತ್ತು ಜಗನ್ನಾಥಎಂ. ಬೈಲುಪತ್ತಾರರವರು ಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ಓದುಗರ ಮುಂದಿಟ್ಟಿದ್ದಾರೆ.

 • ಗುರುತು ಸಂಖ್ಯೆ.

  KPP 0132

 • ಲೇಖಕರು

  ವಿಶ್ವಾನಾಥ ಎಲ್.ಬೈಲಪತ್ತಾರ / ಜಗನ್ನಾಥ, ಎಂ.ಬೈಲಪತ್ತಾರ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2008

 • ಐಎಸ್‌ಬಿಎನ್‌

  81-7713-226-1

 • ಬೆಲೆ

  55/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 28/-

 • ಪುಟಗಳು

  154

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ