ಸಾಧನೆಗಳು

 • ಜನಪ್ರಿಯ ಪುಸ್ತಕಮಾಲೆ, ವಿಜ್ಞಾನ ಪುಸ್ತಕ ಮಾಲೆ, ಮೂಲಭೂತ ಶೈಕ್ಷಣಿಕ ಮಾಲೆಯಂಥ ಹಲವಾರು ಪ್ರಕಟಣಾ ಮಾಲೆಗಳ ಆರಂಭ.
 • ಗ್ರಾಮ ಪಟ್ಟಣಗಳಲ್ಲಿ, ಸಂತೆ ಮಾಳಗಳಲ್ಲಿ ಕನ್ನಡ ಪುಸ್ತಕ ಜಾತ್ರೆಗಳ ಏರ್ಪಾಡು.
 • ಜನಪರ ಮಾಲೆಯಂತಹ ಕೆಲವೊಂದು ನೂತನ ಪ್ರಕಟಣಾ ಯೋಜನೆಗಳ ಪ್ರಾರಂಭ.
 • ‘ಪುಸ್ತಕಲೋಕ’ ನಿಯತಕಾಲಿಕೆಯ ಆರಂಭ.
 • ಪುಸ್ತಕ ಮೇಳಗಳನ್ನು ತಾಲ್ಲೂಕು ಮಟ್ಟಕ್ಕೆ ಕೊಂಡೊಯ್ದು ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿ ಪುಸ್ತಕಮೇಳಗಳ ಏರ್ಪಾಡು.
 • ಕನ್ನಡದ ಸಿದ್ಧ ಪ್ರಸಿದ್ಧ ಅನೇಕ ಲೇಖಕರ ಗ್ರಂಥಗಳನ್ನು ಪ್ರಾಧಿಕಾರದಿಂದ ಪ್ರಕಟಣೆ.
 • ಯುವ ಸಮುದಾಯದಲ್ಲಿ ವಚನಾಭಿರುಚಿ ಹೆಚ್ಚಿಸಲು ರಾಜ್ಯಾದ್ಯಂತ ವಚನಾಭಿರುಚಿ ಕಮ್ಮಟಗಳ ಸ್ಥಾಪನೆ.
 • ಕನ್ನಡ ಪುಸ್ತಕಗಳ ರಿಯಾಯಿತಿ ಮೇಳ ಎಂಬ ಹೊಸ ಪರಿಕಲ್ಪನೆಯನ್ನು ಜಾರಿಗೊಳಿಸಿ ಬೆಂಗಳೂರಿನಲ್ಲಿ ಎರಡು ಯಶಸ್ವಿ ಮೇಳಗಳನ್ನು ಏರ್ಪಡಿಸಲಾಯಿತು.
 • ವೈದ್ಯವಿಜ್ಞಾನ ಸಾಹಿತ್ಯ ಮಾಲೆಯಡಿ 50 ಪುಸ್ತಕಗಳ ಪ್ರಕಟಣೆ,
 • ಕನ್ನಡ ಭವನದ ಆವರಣದಲ್ಲಿ ಸಿರಿಗನ್ನಡ ಪುಸ್ತಕ ಮಳಿಗೆಯ ಉದ್ಘಾಟನೆ ಹಾಗೂ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಜ್ಯದ ಎಲ್ಲ ಅಕಾಡೆಮಿಗಳ ಪ್ರಕಟಣೆಗಳು ಒಂದೆಡೆ ದೊರೆಯುವ ಸೌಲಭ್ಯದ ಏರ್ಪಾಟು.
 • ಕನ್ನಡದ ಪ್ರಾತಿನಿಧಿಕ ಕೃತಿಗಳನ್ನು ಬ್ರೈಲ್ ಲಿಪಿಗೆ ಅಳವಡಿಸುವ ಯೋಜನೆಯಡಿ ಈಗಾಗಲೇ 50 ಪುಸ್ತಕಗಳ ಪ್ರಕಟಣೆ.

ಪ್ರಕಟಿತ ಪುಸ್ತಕಗಳು
ಚಿತ್ರಗಳು